ಕೋಟ : ಸಾಸ್ತನ ಟೋಲ್ ಗೇಟ್ ಬಳಿ ಡಿಸೇಂಬರ್ .18 ರ ಶನಿವಾರ ಸಂಜೆ ನಡೆದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತದಲ್ಲಿ ಕಾರು ಜಖಂ ಗೊಂಡು, ಚಾಲಕ ಪಾರಾಗಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಉಡುಪಿಯಿಂದ ಕುಂದಾಪುರಕ್ಕೆ ಬರುತ್ತಿರುವ ಕಾರನ್ನು ಟೋಲ್ ಗೇಟ್ ನಲ್ಲಿ ನಿಲ್ಲಿಸಿ ಚಾಲಕ ಟೋಲ್ ಕಟ್ಟುತ್ತಿರುವಾಗ, ಅದರ ಹಿಂದೆ ನಿಂತಿದ್ದ ಲಾರಿ ಹಠಾತ್ತನೆ ಮುಂದೆ ಚಲಿಸಿ ಈ ದುರಂತ ಸಂಭವಿಸಿದೆ.
ಢಿಕ್ಕಿ ಹೊಡೆದ ರಭಸಕ್ಕೆ ಕಾರು ಕೂಡಾ ಮುಂದೆ ಚಲಿಸಿ ಸಂಪೂರ್ಣ ಜಖಂ ಗೊಂಡಿದೆ. ಆದರೆ ಚಾಲಕ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಕೋಟ ಪೊಲೀಸರು ವಾಹನಗಳನ್ನು ಬದಿಗೆ ಸರಿಸಿ ಸಂಚಾರ ಸುಗಮಗೊಳಿಸಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ