Slider

ಉಡುಪಿ:-ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ವಿತರಣೆ18-12-2021

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ - 19 ಸೋಂಕಿನಿಂದ ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ಎಸ್.ಡಿ.ಆರ್.ಎಫ್ ನಿಧಿಯಿಂದ ತಲಾ ರೂ. 50,000/ ಪರಿಹಾರ ಧನ ನೀಡಲಾಗುತ್ತಿದೆ. ಮೃತಪಟ್ಟ ವ್ಯಕ್ತಿಯ ವಾರಿಸುದಾರರ ಖಾತೆಗೆ ನೇರವಾಗಿ ಈ ನಗದು  ಜಮಾ ಮಾಡಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರದಿಂದ ಬಿ.ಪಿ.ಎಲ್ ಕುಟುಂಬಕ್ಕೆ ನೀಡಲಾಗುವ 1 ಲಕ್ಷ ಹೆಚ್ಚುವರಿ ಪರಿಹಾರ ಧನದ ಚೆಕ್ ನ್ನು ಶಾಸಕ ರಘುಪತಿ ಭಟ್ ಇಂದು ಮೃತರ ಕುಟುಂಬಕ್ಕೆ ವಿತರಿಸಿದರು.


ಉಡುಪಿ ವಿಧಾನಸಭೆ ಕ್ಷೇತ್ರದ 26 ಕುಟುಂಬಗಳಿಗೆ ಒಟ್ಟು 26 ಲಕ್ಷ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.
ಉಡುಪಿ ವಿಧಾನಸಭೆ ಕ್ಷೇತ್ರದ 26 ಕುಟುಂಬಗಳಿಗೆ ಒಟ್ಟು 26 ಲಕ್ಷ ಮೊತ್ತದ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ನಗರ ಸಭೆಯ ಪೌರಾಯುಕ್ತರಾದ ಉದಯ್ ಶೆಟ್ಟಿ, ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್ ಹಾಗೂ ನಗರಸಭಾ ಸದಸ್ಯರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo