Slider

ಉಡುಪಿ:-ಆಟೋ ರಿಕ್ಷಾ ದರ ಏರಿಕೆಗೆ ಮನವಿ 17-12-2021

ಉಡುಪಿ: ಆಟೋ ಗ್ಯಾಸ್, ಇನ್ಸೂರೆನ್ಸ್ ಪ್ರೀಮಿಯಂ, ವಾಹನ ಬಿಡಿ ಭಾಗಗಳ ಬೆಲೆ ವಿಪರೀತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದರ ಪುನರ್ವಿಮರ್ಶೆ ಮಾಡಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಆಟೋ ಯುನಿಯನ್ ಮನವಿ ಸಲ್ಲಿಸಿತು.

ಈ ಸಮಯದಲ್ಲಿ ಬಸ್ ದರವನ್ನು 2 ಬಾರಿ ಹೆಚ್ಚಿಸಿದರೂ ರಿಕ್ಷಾ ದರವನ್ನು ಒಮ್ಮೆ ಸಹ ಹೆಚ್ಚಿಸಿಲ್ಲದಿರುವುದನ್ನು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.

ಸಿಐಟಿಯುಗೆ ಸೇರಿದ ಕುಂದಾಪುರ ಮತ್ತು ಬ್ರಹ್ಮಾವರ ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಮುಖಂಡರಾದ ಲಕ್ಷ್ಮಣ್, ರಾಜು ದೇವಾಡಿಗ, ರಮೇಶ್, ನರಸಿಂಹ ಬಿ, ಸದಾಶಿವ ಪೂಜಾರಿ, ಅರವಿಂದ ದೇವಾಡಿಗ, ಸೂರ್ಯ ಪೂಜಾರಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಮೊದಲಾದವರು ನಿಯೋಗದಲ್ಲಿದ್ದವರು ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಸುಮಾರು 2 ವರ್ಷಗಳ ಹಿಂದೆ ಆಟೋ ರಿಕ್ಷಾದ ಕನಿಷ್ಟ ಮೀಟರ್ ದರ ಮತ್ತು ರನ್ನಿಂಗ್ ಕಿಲೊ.ಮೀಟರ್ ದರ ನಿಗದಿ ಮಾಡಿಲಾಗಿತ್ತು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo