ಈ ಲಾರಿ ಪಂಜಾಬ್ ನಿಂದ ಲ್ಯಾಮಿನೇಟೆಡ್ ಸನ್ ಮೈಕ್ ಶೀಟುಗಳನ್ನು ತುಂಬಿಕೊಂಡು ಮಂಗಳೂರಿನ ಕಡೆ ಸಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಕೋಟಾದ ಮೂರುಕೈ ಬಳಿ ಬರುವಾಗ ಲಾರಿಯ ಬ್ರೇಕ್ ಫೈಲ್ಯೂರ್ ಗೊಂಡು ಈ ದುರಂತ ಸಂಭವಿಸಿದೆ. ರಸ್ತೆಯಿಂದ ಬದಿಗೆ ಸರಿದ ಲಾರಿ ವಿದ್ಯುತ್ ಕಂಬ ಹಾಗೂ ತೆಂಗಿನಮರಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ
ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ