Slider

ಉಡುಪಿ:-ವೃದ್ಧರೋರ್ವರ ಪ್ರಾಣ ಉಳಿಸುವ ಭರದಲ್ಲಿ ತನ್ನ ಉಸಿರನ್ನೇ ಚೆಲ್ಲಿದ ಚಾಲಕ ಸಾವು14-12-2021

ಉಡುಪಿ : ವಾಹನ ಚಾಲನೆಯ ವೇಳೆಯಲ್ಲಿ ಎಷ್ಟೇ ಜಾಗೃತರಾಗಿದ್ದರೂ ಕೂಡ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಬೇರೊಬ್ಬರ ಜೀವ ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಇದೀಗ ರಸ್ತೆ ಅಡ್ಡಲಾಗಿ ಬಂದ ವೃದ್ದನೋರ್ವನ ಪ್ರಾಣ ಉಳಿಸಲು ಭರಸದಲ್ಲಿ ಮೀನಿನ ಲಾರಿಯ ಚಾಲಕನೋರ್ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಉಡುಪಿಯ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ತೌಫಿಕ್‌ (28 ವರ್ಷ) ಎಂಬವರೇ ಪ್ರಾಣ ಕಳೆದುಕೊಂಡ ಚಾಲಕ. ರಾಷ್ಟ್ರೀಯ ಹೆದ್ದಾರಿ 66 ರ ಸಂತೆಕಟ್ಟೆಯ ಬಳಿಯಲ್ಲಿ ತೌಫಿಕ್‌ ಚಲಾಯಿಸುತ್ತಿದ್ದ ಮೀನಿನ ಲಾರಿ ಸಂಚರಿಸುತ್ತಿತ್ತು. ಈ ವೇಳೆಯಲ್ಲಿ ವೃದ್ದನೋರ್ವ ಲಾರಿಗೆ ಅಡ್ಡ ಬಂದಿದ್ದಾನೆ. ಮೀನಿನ ವಾಹನ ವೇಗವಾಗಿ ಬರುತ್ತಿದ್ದು, ವೃದ್ದನನ್ನು ರಕ್ಷಿಸುವ ಸಲುವಾಗಿ ಲಾರಿಯನ್ನು ಪಕ್ಕಕ್ಕೆ ಎಳೆದಿದ್ದಾರೆ. ಈ ವೇಳೆಯಲ್ಲಿ ಲಾರಿ ರಸ್ತೆ ಪಕ್ಕದಲ್ಲಿರುವ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕ ತೌಫಿಕ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇನ್ನು ಲಾರಿಯಲ್ಲಿದ್ದ ಕ್ಲೀನರ್ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ವೃದ್ದನ ಜೀವ ಉಳಿಸಲು ಹೋದ ಲಾರಿ ಚಾಲಕ ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾನೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo