ಮಂಗಳೂರು: ಕರೋನದ ನಡುವೆಯು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಗಿದರು ಕೂಡ ಪದವಿ ಫಲಿತಾಂಶ ಸಂಪೂರ್ಣವಾಗಿ ಗೊಂದಲಮಯವಾಗಿದೆ. ಅಪೂರ್ಣ ಫಲಿತಾಂಶ ಪ್ರಕಟಗೊಳಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದಕ್ಷಿಣ.ಕನ್ನಡ,ಜಿಲ್ಲಾ ಸಮಿತಿ, ಈ ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಐದು ಬಾರಿ ಸ್ನಾತಕೋತ್ತರ ಪದವಿ ಪ್ರವೇಶಾತಿಯನ್ನು ಮುಂದೂಡುವ ಮೂಲಕ ವಿಶ್ವವಿದ್ಯಾಲಯ ಗೊಂದಲಮಯ ವಾತಾವರಣವನ್ನು ಸೃಷ್ಟಿಸಿದೆ. ಬಿಎಡ್ ಕೋರ್ಸ್ ಸೇರುವ ಹಲವಾರು ವಿದ್ಯಾರ್ಥಿಗಳ ಕನಸಿಗೆ ತಣ್ಣೀರು ಎರಚಿದೆ. ಫಲಿತಾಂಶ ಪ್ರಕಟವಾಗಿದ್ದರೂ ಅದರಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ.
ಇನ್ನು ಈಗಾಗಲೇ ಪ್ರಕಟಿಸಿರುವ ಫಲಿತಾಂಶದಲ್ಲೂ ಕೂಡ ಹಲವು ತಪ್ಪುಗಳಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ ನಮಗೇನು ಮಾಹಿತಿ ಇಲ್ಲ ಎಂಬ ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ. ವಿವಿ ಕಚೇರಿಗೆ ತೆರಳಿ ವಿಚಾರಿಸಿದಾಗ ಅದನ್ನು ಸರಿಪಡಿಸುತ್ತೇವೆ ಎನ್ನುತ್ತಿದ್ದಾರೆ. ಹಾಗಗಿ ಪದವಿ ಫಲಿತಾಂಶ ಪ್ರಕಟಣೆಯಲ್ಲಾದ ಗೊಂದಲಗಳನ್ನು ನಿವಾರಿಸಿ ಸ್ನಾತಕೋತ್ತರ ತರಗತಿಯನ್ನು ಪ್ರಾರಂಭಿಸಬೇಕು ಎಂದು ಸಿಎಫ್‌ಐ ಜಿಲ್ಲಾಧ್ಯಕ್ಷ ಸರ್ಫುದ್ದೀನ್ ಒತ್ತಾಯಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ