Slider

ಮಣಿಪಾಲ- ವಿಹಾರಕ್ಕೆ ಬಂದ ಸ್ನೇಹಿತರ ಮೇಲೆ ಸಂಘ ಪರಿವಾರ ಕಾರ್ಯಕರ್ತರಿಂದ ಹಲ್ಲೆ 11-12-2021

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲ ಮಣ್ಣಪಳ್ಳದಲ್ಲಿ ವಿಹಾರಕ್ಕೆ ಬಂದಿದ್ದ ಯುವಕ ಮತ್ತು ಯುವತಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಸಾಲಿಗ್ರಾಮದ ಅಲ್ತಾಫ್(27) ಎಂಬಾತ ತನ್ನ ನೆರೆಮನೆಯ ಸ್ನೇಹಿತಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದನು.
ಬಳಿಕ ಅಲ್ಲಿಂದ ಅವರಿಬ್ಬರು ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿಗೆ ಹೋದಾಗ ಆರೋಪಿಗಳಾದ ಪರ್ಕಳದ ಹೆರ್ಗದ ಪ್ರಾಣೇಶ್, ವಿನೂತ್ ಪೂಜಾರಿ ಮತ್ತು ಸಂಜಯ್ ಕುಮಾರ್ ಎಂಬವರು ಇವರಿಬ್ಬರನ್ನು ತಡೆದು ನಿಲ್ಲಿಸಿದರು. ನಂತರ ಇವರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ತಾಫ್‌ನನ್ನು ಕೈಯಿಂದ ತಳ್ಳಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವರದಿ:-ಉಡುಪಿ ಫಸ್ಟ್

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo