Slider

ಮಂಗಳೂರು:-ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣದ ಅಂಗವಾಗಿ ಎ.ಬಿ.ವಿ.ಪಿ ವತಿಯಿಂದ ಸಾಮಾಜಿಕ ಕಾರ್ಯ10-12-2021

ಮಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು 65ನೇ ಮಹಾ ಪರಿನಿರ್ವಾಣದ ಅಂಗವಾಗಿ ಮಂಗಳೂರು ವಿಶ್ವವಿದ್ಯಾಲಯ ದತ್ತು ಸ್ವೀಕರಿಸಿದ  ಸರ್ಕಾರಿ.ಹಿರಿಯ.ಪ್ರಾಥಮಿಕ.ಶಾಲೆ.ಕೊಣಾಜೆಪದವು ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ವಿತರಣೆ ಮತ್ತು ಸಸಿನೆಡುವ ಕಾರ್ಯಕ್ರಮವನ್ನು ಅಖಿಲ.ಭಾರತ.ವಿಧ್ಯಾರ್ಥಿ.ಪರಿಷತ್ ಮಂಗಳೂರು ವಿಶ್ವವಿದ್ಯಾಲಯ ಘಟಕದ ವತಿಯಿಂದ ಹಮ್ಮಿಕೊಳ್ಳಲಾಯಿತು.

ಹಿರಿಯ ವಿದ್ಯಾರ್ಥಿ ಮನೋಜ್ ಕರ್ಕೇರಾ ಇವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೋ.ಪಿ.ಎಲ್.ಧರ್ಮ ಅವರು ಉದ್ಘಾಟನೆ ಮಾಡಿ  ವಿಧ್ಯಾರ್ಥಿಗಳಿಗೆ ಹಿತನುಡಿಯನ್ನು  ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ.ಯಶಸ್ವನಿ.ಭಟ್ಟಾಂಗಾಯ ಉಪಸ್ಥಿತರಿದ್ದು ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಿ ಅಂಬೆಡ್ಕರ್ ತತ್ವಗಳನ್ನು ಕೇವಲ ಪುಸ್ತಕಗಳಿಗೆ, ಸವಲತ್ತುಗಳಿಗೆ, ಬಾಷಣಗಳಿಗೆ ಸೀಮಿತಗೊಳಿಸದೆ ಈ ಕಾರ್ಯಕ್ರಮದ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದ ವಿಧ್ಯಾರ್ಥಿ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು. 

ಕಾರ್ಯಕ್ರಮದ ಕೊನೆಯಲ್ಲಿ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಕಾರ್ಯಕ್ರಮಕ್ಕೆ ಪೂರ್ಣವಿರಾಮ ಹಾಕಲಾಯಿತು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo