ಉಡುಪಿ:-ಕಲ್ಲು ಕ್ವಾರೆಯಲ್ಲಿ ರಾಸಾಯನಿಕ ಸ್ಪೋಟಗೊಂಡು ಇಬ್ಬರು ಗಂಭೀರ
ಕಲ್ಲು ಕ್ವಾರೆ ಸ್ಪೋಟಗೊಂಡು ಕಾರ್ಮಿಕರಿಗೆ ಗಂಭೀರ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಜಾರ್ಕಳ ಎಂಬಲ್ಲಿ ನಡೆದಿದೆ.
ಕಲ್ಲು ಕ್ವಾರೆ ಕಾಮಗಾರಿ ನಡೆಯುತ್ತಿರುವ ವೇಳೆ ರಾಸಾಯನಿಕ ವಸ್ತುಗಳ ಬಳಕೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೆ ಇರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ತಮಿಳುನಾಡು ಮೂಲದ ಮಂಜುನಾಥ್ ೪೪ ಮತ್ತು ರಾಘವೇಂದ್ರ ೪೦ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಕಾರ್ಕಳ ಪೋಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ