ಉಡುಪಿ : ಬುಡಕಟ್ಟು ಸಮುದಾಯದ ವ್ಯಕ್ತಿಯಾಗಿರುವ ಪ್ರವೀಣ ಎಂಬವರಿಗೆ ಮುನೀರ್ ಎಂಬಾತ ಜಾತಿ ನಿಂದನೆ ಮಾಡಿರುವ ಕುರಿತು ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಆಟೋ ಚಾಲಕನಾಗಿರುವ ಪ್ರವೀಣ್ ಅವರು ನ. 28 ರಂದು ಉಡುಪಿಯ ಜಾಮಿಯಾ ಮಸೀದಿ ಬಳಿ ರಿಕ್ಷಾ ನಿಲ್ಲಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದ ವೇಳೆ, ಮುನೀರ್ ಎಂಬಾತ ತನ್ನ ರಿಕ್ಷಾದಲ್ಲಿ ಬಂದು ಪ್ರವೀಣ್ ಅವರ ರಿಕ್ಷಾಗೆ ಅಡ್ಡ ನಿಲ್ಲಿಸಿದರು.
ನಂತರ 'ರಿಕ್ಷಾ ತೆಗಿ, ನಿಮಗೆ ಇಲ್ಲಿ ನಿಲ್ಲಿಸಲು ಯಾರು ಹೇಳಿದ್ದು, ನೀನು ಕೊರಗ ಇಲ್ಲಿಂದ ಹೋಗು' ಎಂದು ಬೈದು ಜಾತಿನಿಂದನೆ ಮಾಡಿದ್ದಾನೆ ಹಾಗೂ ಇತರ ಮೂವರು ಹೊಡೆಯಲು ಬಂದಿರುತ್ತಾರೆ ಎಂದು ಪ್ರವೀಣ್ ದೂರಿನಲ್ಲಿ ತಿಳಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ