ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟಿನ ಜಯರಾಜ್ ಶೆಟ್ಟಿ ಅವರ ಮನೆಯಲ್ಲಿ ಸುಮಾರು 9,88,500 ರು. ಮೌಲ್ಯದ ಚಿನ್ನ - ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಕುರಿತು ಧಾರವಾಡದ ಜನತಾನಗರದ ನಿವಾಸಿಗಳಾದ ರಾಜು ಪಾಮಡಿ (42) ಹಾಗೂ ಆತನ ಹೆಂಡತಿ ಪದ್ಮ ಪಾಮಡಿ (37), ಅವರಿಂದ ಒಟ್ಟು 202 ಗ್ರಾಂ ಚಿನ್ನ ಹಾಗೂ 1.683 ಕೆಜಿ ಬೆಳ್ಳಿ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜೇಶ್ ಮೂಲತಃ ಉಡುಪಿಯ ಇಂದ್ರಾಳಿಯವನಾಗಿದ್ದು, ಕಾಪು, ಮಣಿಪಾಲಗಳಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದು,
ಜುಲೈನಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು, ಮತ್ತೇ ಹೆಂಡತಿಯೊಂದಿಗೆ ಕುಂದಾಪುರ, ಸುರತ್ಕಲ್ , ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ, ಕಾರಾವಾರಗಳಲ್ಲಿ ಮನೆ ಹಾಗೂ ದೇವಸ್ಥಾನಗಳಲ್ಲಿ ಕಳವು ಮಾಡಿದ್ದಾನೆ.
ಕುಂದಾಫುರ ಠಾಣೆಯ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್ ಎಸೈ ಸದಾಶಿವ ಗವರೋಜಿ, ಟ್ರಾಫಿಕ್ ಎಸೈ ಸುದರ್ಶನ್, ಶಂಕರನಾರಾಯಣ ಎಸೈ ಶ್ರೀಧರ ನಾಯ್ಕ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ