ಪ್ರವಾಸಿ ತಾಣಕ್ಕೆ ಹೆಸರುವಾಸಿಯಾದ ಸುಪ್ರಸಿದ್ಧ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳಕ್ಕೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಯುಕ್ತೆ ರೋಹಿಣಿ ಸಿಂಧೂರಿ ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ರೋಹಿಣಿ ಸಿಂಧೂರಿ ಯವರನ್ನು ಅನುವಂಶಿಕ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಕಲಾವತಿ ಎಸ್.ಚಾತ್ರ ದಂಪತಿ ಅವರು ದೇವಳಕ್ಕೆ ಬರ ಮಾಡಿಕೊಂಡರು.
ಪುರಾಣ ಪ್ರಸಿದ್ದ ಶ್ರೀ ಕಮಲಶಿಲೆ ಕ್ಷೇತ್ರದ ಮಹತ್ವವನ್ನು ತಿಳಿಸಿದರು. ದೇವಳದ ವತಿಯಿಂದ ಗಂಧ ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ,ಅನುವಂಶಿಕ ಧರ್ಮದರ್ಶಿ ಚಂದ್ರಶೇಖರ ಶೆಟ್ಟಿ ಆಜ್ರಿ, ಮ್ಯಾನೇಜರ್ ಗುರು ಭಟ್, ಪ್ರಸಾದ ಚಾತ್ರ ಬರೆಗುಂಡಿ, ಅರ್ಚಕ ವೃಂದವರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
.
ದೇವಳವನ್ನು ವೀಕ್ಷಿಸಿದ ಅವರು, ಅನ್ನಪ್ರಸಾದ ಸ್ವೀಕರಿಸಿ, ಭಕ್ತರಿಗೆ ದೇವಳದಲ್ಲಿ ಸಿಗುವ ಸೌಲಭ್ಯ ಮನವರಿಕೆ ಮಾಡಿಕೊಂಡು ಶ್ರೀ ಕ್ಷೇತ್ರದ ಸ್ವಚ್ಛತೆ, ಸುಚಿ-ರುಚಿಯಾದ ಅನ್ನ ಪ್ರಸಾದ ಸೇರಿದಂತೆ ಸಕಲ ಸೌಲಭ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ