ಉಡುಪಿ:-ಮಣಿಪಾಲದ ನೇತಾಜಿ ನಗರದ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಮತಾಂತರದ ಪೀಡೆಗೆ ಇದೀಗ ಮಹಿಳೆ ಬಲಿಯಾದ್ರ ಎನ್ನುವಂತಹ ಅನುಮಾನ ಮೂಡುವಂತಾಗಿದೆ.
ಮಣಿಪಾಲದ ನೇತಾಜಿ ನಗರದ ಜಯಲಕ್ಷೀ ೩೫ ಎನ್ನುವ ಮಹಿಳೆ ಕಳೆದ ಕೆಲವು ದಿನಗಳಿಂದ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.
ಆದರೆ ಇದೀಗ ಸಾಯುವ ಮುನ್ನ ಮಹಿಳೆ ಹಿಂದೂ ಜಾಗರಣೆ ವೇದಿಕೆಯ ಮುಖಂಡರ ಜೊತೆ ಮಾತನಾಡಿರುವ ಆಡಿಯೋ ಒಂದು ಬಹಿರಂಗಗೊಂಡಿದ್ದು, ಆ ಆಡಿಯೋದಲ್ಲಿ ತನ್ನ ಗಂಡ ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುವಂತೆ ಪದೇ ಪದೇ ಪೀಡಿಸುತ್ತಿದ್ದ ಎನ್ನುವ ಆರೋಪವನ್ನು ಮಾಡಿದ್ದಾರೆ.
ಜೊತೆಗೆ ತನಗೆ ಈ ಜೀವನ ಸಾಕು , ನಾನು ದೂರ ಹೋಗುತ್ತಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ.
ಸದ್ಯ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ