Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ಪುನಿತ್ ರಾಜಕುಮಾರ್ ಸ್ಮರಣಾರ್ಥ ಆರ್ಯ ಸಂಸ್ಥೆ ವತಿಯಿಂದ ಬೃಹತ್ ನೇತ್ರದಾನ ಶಿಬಿರ.07-12-2021


ಉಡುಪಿ:-ಪುನಿತ್ ರಾಜಕುಮಾರ್ ಸ್ಮರಣಾರ್ಥ ಆರ್ಯ ಸಂಸ್ಥೆ ವತಿಯಿಂದ ಬೃಹತ್ ನೇತ್ರದಾನ ಶಿಬಿರ.


ಕನ್ನಡದ ಯುವರತ್ನ ಪುನೀತ್ ರಾಜಕುಮಾರ್ ಸ್ಮರಣೆಯೊಂದಿಗೆ" ಆರ್ಯ ' ನಮ್ಮ ಚಿತ್ತ ಬದಲಾವಣೆಯತ್ತ ' ಹಾಗೂ ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ನೇತ್ರ ಜ್ಯೋತಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಐ ಬ್ಯಾಂಕ್ ವತಿಯಿಂದ ಬ್ರಹತ್ ನೇತ್ರದಾನ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಂ. ಎಸ್ ಡಿಪಾರ್ಟ್ಮೆಂಟ್ ಆಫ್ ಕಾರ್ನಿಯಾ ಮತ್ತು ರಿಫ್ರಿಕ್ಟಿವ ಸರ್ಜನ್ ಆದಂತಹ ಡಾ. ಮೈತ್ರಿ ವಿ ತುಂಗಾ ಕಣ್ಣಿನ ಪೊರೆ ಯ ತೊಂದರೆ ಅದಕ್ಕೆ ಪರಿಹಾರ ಹಾಗೂ ನೇತ್ರದಾನದ ಮಹತ್ವವನ್ನು ತಿಳಿಸಿಕೊಟ್ಟರು .
ಆರ್ಯ ಸಂಸ್ಥೆಯ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು ನೇತ್ರದಾನ ಶಿಬಿರದಲ್ಲಿ ಎಂಬತ್ತಕ್ಕೂ ಮಿಕ್ಕಿ ನೇತ್ರದಾನಕ್ಕೆ ಸಹಿ ಹಾಕಿರುವಂತಹ ಸಂತಸದ ಕ್ಷಣ ವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಡಾ. ಮೈತ್ರಿ ವಿ ತುಂಗಾ, ಎಂ. ಎಸ್ ಡಿಪಾರ್ಟ್ಮೆಂಟ್ ಆಫ್ ಕಾರ್ನಿಯಾ ಮತ್ತು ರಿಫ್ರಿಕ್ಟಿವ ಸರ್ಜರಿ, ಮಿ. ಎಂ. ವಿ ಆಚಾರ್ಯ,ಅಡ್ಮಿನಿಸ್ಟ್ರೇಷನ್ ಆಫೀಸ್, ಪ್ರಸಾದ್ ನೇತ್ರಾಲಯ, ಆರ್ಯ ಸಂಸ್ಥೆಯ ಮಾಲೀಕರಾದ
ಮಂಜುನಾಥ್ ಚೇರ್ಕಾಡಿ, ಲಕ್ಷ್ಮೀಶ್, ನಿವೃತ್ತ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೆಟ್ಟಿ ಬೆಟ್ಟು ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪಿಕಾ, ಮಹಾಲಕ್ಷ್ಮಿ ದೇವಾಡಿಗ, ರಚನಾ ನೆರವೇರಿಸಿಕೊಟ್ಟರು
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo