ಇವರು ವಯೊಲಿನ್ ನುಡಿಸಾರಿಕೆಯನ್ನು ಹೇಳಿ ಕೊಡುತಿದ್ದಾಗ ವೇಳೆ ಆಯಾಸದಿಂದ ಕುಸಿದು ಬಿದ್ದರೆನ್ನಲಾಗಿದೆ. ಈ ವೇಳೆ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಇವರು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿವಂಗತ ಪ್ರೊ.ರಾಮ ಭಟ್ ಅವರ ಪತ್ನಿ. ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆ. ಹಲವಾರು ಸಂಗೀತಗಾರರಿಗೆ ಸಾಥ್ ಕೊಟ್ಟಿರುವ ಇವರು, ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿದ್ದರು.
ತನ್ನ ಗುರು ಉಡುಪಿ ಲಕ್ಷ್ಮೀ ಬಾಯಿ ಹೆಸರಲ್ಲಿ ಇವರು ನಿರಂತರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಉತ್ತಮ ಟೆನಿಸ್ ಚಾಂಪಿಯನ್ ಕೂಡ ಆಗಿದ್ದರು
ಮೃತರು ಪುತ್ರರಾದ ನೇತ್ರ ತಜ್ಞ ಡಾ.ಸತೀಶ್ ಹಾಗೂ ಮೃದಂಗ ವಿದ್ವಾನ್ ದೇವೇಶ್ ಭಟ್, ಪುತ್ರಿ ಕಂಪ್ಯೂಟರ್ ಇಂಜಿನಿಯರ್ ವಿನಯ ಅವರನ್ನು ಅಗಲಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ