ಬ್ರಹ್ಮಾವರ : ಕುಂದಾಪುರ ಮತ್ತು ಉಡುಪಿ ನಡುವೆ ಸಂಚರಿಸುವ ಖಾಸಗಿ ಎಕ್ಸಪ್ರೆಸ್ ಬಸ್ ಒಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆ ಬಿ.ಸಿ ರೋಡ್ ನಲ್ಲಿ ಸಂಭವಿಸಿದೆ.
ನವೆಂಬರ್ 11 ರಂದು ಅಪರಾಹ್ನ 3:45ರ ಸುಮಾರಿಗೆ ಭಾರತಿ ಸಂಸ್ಥೆಗೆ ಸೇರಿದ ಕುಂದಾಪುರ ರಿಂದ ಉಡುಪಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತಿದ್ದ ಸಂದರ್ಭದಲ್ಲಿ ಬಿ.ಸಿ ರೋಡ್ ನ ಮಾನಸ ಲಾಡ್ಜಿನ ಸಮೀಪ ಸಂಚರಿಸುತ್ತಿದ್ದ ಬಸ್ಸಿನ ಸ್ಟಿಯರಿಂಗ್ ರಾಡ್ ಮುರಿದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾದು ಹೋಗಿ ಉಡುಪಿ ಯಿಂದ ಕುಂದಾಪುರ ಕಡೆ ತೆರಳುವ ರಸ್ತೆಗೆ ಮುಖಮಾಡಿ ನಿಂತಿದೆ.
ಸಧ್ಯ ಈ ಘಟನೆಗೆ ಸಂಬಂಧಿಸಿದಂತೆ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ