ಬಹು ಚರ್ಚಿತ ಹಾಗೂ ವಿವಾದಾತ್ಮಕ ಕೃಷಿ ಕಾಯ್ದೆ ವಾಪಸ್ ಪಡೆದ ಬೆನ್ನಲ್ಲೇ ಹಲವು ರೀತಿಯಲ್ಲಿ ಕೇಂದ್ರ ಸರ್ಕಾರದ ನಿರ್ಣಯವನ್ನು ವಿಶ್ಲೇಷಿಸಲಾಗುತ್ತಿದೆ.
ಒಂದೆಡೆ ಇದು ಚುನಾವಣಾ ಗಿಮಿಕ್ ಎಂದು ವಿಪಕ್ಷಗಳು ಆರೋಪಿಸುತ್ತಿದ್ದರೆ, ಇನ್ನೊಂದೆಡೆ ಇದರಲ್ಲಿ ರಾಜಕೀಯ ಉದ್ದೇಶ ಏನೂ ಇಲ್ಲ ಎಂದು ಬಿ.ಜೆ.ಪಿ. ವಾದಮಾಡುತ್ತಿದೆ.
ಆದರೆ ಕೃಷಿ ಕಾಯ್ದೆ ವಾಪಸ್ ಪಡೆದ ಭಾಷಣದಲ್ಲಿ ಪ್ರಧಾನಿ ಆಡಿದ ಆ ಒಂದು ಮಾತು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. "ನಾನು ಕೃಷಿ ಕಾಯ್ದೆ ಜಾರಿಗೆ ತಂದದ್ದು ರೈತರಿಗಾಗಿ ವಾಪಾಸ್ ಪಡೆದದ್ದು ದೇಶಕ್ಕಾಗಿ" ಎನ್ನುವ ಒಂದು ಮಾತು ಭಾರೀ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ