Slider


ಉಡುಪಿ:-ರಥಬೀದಿಯಲ್ಲಿ ಹೂವಿನ ಖರೀದಿ ಬಲು ಜೋರು

ಉಡುಪಿ:-ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಂದಿನಿಂದ ದೀಪೋತ್ಸವದ ಸಂಭ್ರಮ ಹಿನ್ನೆಲೆಯಲ್ಲಿ ಮಠದ ರಥಬೀದಿಯಲ್ಲಿ ಶ್ರೀ ಮಠದ ಭಕ್ತರು ಹಾಗೂ ಅನೇಕ ಜನರು ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯಗಳು ಕಂಡುಬಂದವು.

ರಥಬೀದಿಯ ತುಂಬೆಲ್ಲ ಹೂವಿನ ವ್ಯಾಪಾರಿಗಳು, ತುಂಬಿದ್ದು ಗ್ರಾಹಕರೂ ಕೂಡ ತಮಗೆ ಬೇಕಾದ ಹೂವನ್ನು ಕೊಂಡುಕೊಳ್ಳುತ್ತಿದ್ದಾರೆ. ಸೇವಂತಿಗೆ, ಮಲ್ಲಿಗೆ, ಚೆಂಡು ಹೂ ಸೇರಿದಂತೆ ಬಗೆಬಗೆಯ ಹೂವುಗಳು ಮಾರಾಟಕ್ಕೆ ಇವೆ.

ಶ್ರೀಕೃಷ್ಣ ಮಠದಲ್ಲಿ ಇಂದು ರಾತ್ರಿಯಿಂದ ವಿಜ್ರಂಭಣೆಯ ದೀಪೋತ್ಸವ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಪೂರ್ವ ಸಿದ್ಧತೆಗಳು ಕೂಡ ಭರದಿಂದ ಸಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo