Slider


ಗುಂಡಿಬೈಲು ಕಳವು ಪ್ರಕರಣ:- ಕದ್ದು ವಸ್ತುಗಳನ್ನು ಮಣ್ಣಿನಡಿ ಹೂತಿಟ್ಟಿದ್ದ ಕಳ್ಳರ ಬಂಧನ

ಗುಂಡಿಬೈಲು ಕಳವು ಪ್ರಕರಣ:- ಕದ್ದು ವಸ್ತುಗಳನ್ನು ಮಣ್ಣಿನಡಿ ಹೂತಿಟ್ಟಿದ್ದ ಕಳ್ಳರ ಬಂಧನ

ಇತ್ತೀಚೆಗೆ ಗುಂಡಿಬೈಲಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ಬೆಳ್ಳಂಪಳ್ಳಿ ಎಂಬಲ್ಲಿ ಬಂಧಿಸಿದ್ದಾರೆ.

ಗುಂಡಿಬೈಲಿನ ಬಳಿ ಬಾಬು ಆಚಾರ್ಯ ಅವರು ಹೊಸ ಮನೆ ನಿರ್ಮಾಣ ಮಾಡಿದ್ದು, ಅವರ ಹಳೆಯ ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಒಳಪ್ರವೇಶಿಸಿ, ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ ತೆಗೆದು ಅದರಲ್ಲಿದ್ದ ಒಟ್ಟು 90 ಗ್ರಾಂ ತೂಕದ 3,60,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ. ಮೌಲ್ಯದ ಬೆಳ್ಳಿ ಸಾಮಗ್ರಿ, ದೇವರ ಡಬ್ಬದಲ್ಲಿದ್ದ 400 ರೂ. ಸಹಿತ ಒಟ್ಟು 3,70,400 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು.

ಕದ್ದ ಚಿನ್ನಾಭರಣಗಳನ್ನು ಆರೋಪಿಗಳು ಗುಂಡಿಬೈಲು ಪಂಚಧೂಮಾವತಿ ದೈವಸ್ಥಾನದ ಬಳಿಯ ಶ್ರೀಕರ ಕಾಮತ್‌ ಅವರ ಜಾಗದಲ್ಲಿನ ಮಣ್ಣಿನ ಅಡಿಯಲ್ಲಿ ಚಿನ್ನಾಭರಣಗಳನ್ನು ಹೂತ್ತಿಟ್ಟಿದ್ದದ್ದರು. ಅಲ್ಲಿಂದ 3,60,000 ರೂ.ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಕ್ಕಿಕಟ್ಟೆಯ ಸುಕೇಶ್‌ ನಾಯ್ಕ (34) ಬಂಧಿತ ಆರೋಪಿಯಾಗಿದ್ದು, ಪೊಲೀಸರ ವಿಚಾರಣೆ ವೇಳೆ ಈತ ತಪ್ಪೊಪ್ಪಿಕೊಂಡಿದ್ದಾನೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo