ಉಡುಪಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮತದಾರ ಸಾಕ್ಷರತ ಸಂಘದ ವತಿಯಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ನೊಂದಾಯಿಸುವ ಕಾರ್ಯಕ್ರಮ ಇಂದು (ಭಾನುವಾರ) ನಡೆಯಿತು.
ಕಾರ್ಯಕ್ರಮದಲ್ಲಿ ಹೆಬ್ರಿಯ ತಹಶೀಲ್ದಾರ್ ಪುರಂದರ ಕೆ ಮಾತಾನಾಡಿ 'ಯುವ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು' ಎಂಬ ಕರೆಯನ್ನಿತ್ತರು.
ಕಾರ್ಯಕ್ರಮ ಉದ್ಘಾಟಿಸಿದ ಚುನಾವಣ ತರಬೇತುದಾರ ಬೈಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗೋಪಾಲಕೃಷ್ಣ ಗೋರೆ 'ಪ್ರಜಾಪ್ರಭುತ್ವದ ಯಶಸ್ಸು ಪ್ರಜ್ಞಾವಂತ ಮತದಾರರ ಕೈಯಲ್ಲಿ ಉಳಿದಿದೆ' ಎಂದರು.
ಸಾಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಾನ್ ಮಾತನಾಡಿ ಆನ್ ಲೈನ್ ನೊಂದಾಯಿಸುವ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಅಧಿಕಾರಿ ಮತದಾರ ಸಾಕ್ಷರತೆ ಸಮಿತಿಯ ಸಂಚಾಲಕ ಬಾಲರಾಜ್, ಡಿ.ಬಿ.ಬಿ.ಎಲ್.ಒ ಕುಸುಮಾ ಮತ್ತು ಪ್ರಸಾದ ಶೆಉ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಾಲತಿಯವರು ಸ್ವಾಗತಿಸಿ ಚೈತ್ರ ಕಾರ್ಯಕ್ರಮ ವಂದಿಸಿದರೆ ಕ್ಷೇಯವೆಂಬವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ