ಉಡುಪಿ:-ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ಖಂಡಿಸಿ ಉಡುಪಿ ಜಿಲ್ಲಾ ಕರವೇ ಮುಖಂಡರು ಬೂಟ್ ಪಾಲಿಶ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಅನ್ಸಾರ್ ಅಹ್ಮದ್ ಮಾತನಾಡಿ , ಉಡುಪಿಯಲ್ಲಿ10 ಡಯಾಲಿಸಿಸ್ ಯಂತ್ರಗಳು ಇದ್ದು ಇದರಲ್ಲಿ ಈಗಾಗಲೇ 5 ಯಂತ್ರಗಳು ಹಾಳಾಗಿವೆ. ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಕಾರಣಕ್ಕೆ ಇಂದು ಸಂಜೆಯ ವರೆಗೆ ನಾವು ಬೂಟ್ ಪಾಲಿಶ್ ಕೆಲಸ ಮಾಡಿ ಬಂದ ಹಣವನ್ನು ರಾಜ್ಯ ಸರಕಾರಕ್ಕೆ ಒಪ್ಪಿಸುತ್ತೆವೆ. ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ನಾಚಿಕೆ ಇದ್ದಲ್ಲಿ ಇವತ್ತು ಸಂಜೆಯ ಒಳಗೆ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದ ಪಕ್ಷದಲ್ಲಿ ತಲೆ ಕೂದಲನ್ನು ತೆಗೆದು ಅದನ್ನು ಸರಕಾರಕ್ಕೆ ಕೊಡುವ ಕೆಲಸವನ್ನು ನಾವು ಮಾಡುತ್ತೆವೆ" ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕರವೇ ಮುಖಂಡರು ಪಾಲ್ಗೊಂಡಿದ್ದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ