ಕಾರ್ಕಳ:-ಸಾಲ ತೀರಿಸಲಾಗದೆ ವಾದ್ಯಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ವಾದ್ಯಗಾರ ಮಂಜುನಾಥ್ 42 ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ.
ಇವರು ವರ್ಷಗಳ ಹಿಂದೆ ಹೊಸ ಮನೆ ಕಟ್ಟಲು ಸಾಲ ಮಾಡಿದ್ದರು, ಆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನವೆಂಬರ್18 ರಂದು ಮಿಯಾರಿನ ತಾಯಿ ಇರುವ ಮನೆಗೆ ಬಂದು, ಬಜಗೋಳಿಗೆ ಹೋಗುವುದಾಗಿ ತಿಳಿಸಿ ಹೋದವರು ವಾಪಾಸು ಮನೆಗೂ ಬಾರದೇ, ನಂದಳಿಕೆಯ ಅವರ ಮನೆಗೂ ಹೋಗದೇ ನಾಪತ್ತೆಯಾಗಿದ್ದರು.
ಹುಡುಕಾಡಿದಾಗ ಮಿಯಾರು ಹೊಳೆಯ ಸಮೀಪ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಮಂಜುನಾಥ ಸಹೋದರ ಕಾಶಿನಾಥ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ