ಉಡುಪಿ: ಎರಡು ದ್ವಿಚಕ್ರ ವಾಹನಗಳ ನಡುವೆ ರಸ್ತೆ ಅಪಘಾತ ನಡೆದಿದ್ದು ಅಪಘಾತದಲ್ಲಿ ಸಹ ಸವಾರೆಯೊಬ್ಬರು ಮೃತಪಟ್ಟ ಘಟನೆ ಸುಭಾಷ್ ನಗರದ ಕುರ್ಕಾಲು ಜಂಕ್ಷನ್ ನಲ್ಲಿ ಇಂದು ಬೆಳಿಗ್ಗೆ 8.45 ಕ್ಕೆ ನಡೆದಿದೆ.
ಮೃತಪಟ್ಟ ಪೈಕಿ ಹೇರೂರು ಗ್ರಾಮದ ಶರ್ಮಿಳಾ (42) ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ವಿದ್ಯೋದಯ ಶಾಲೆಯ ಪರಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರ್ಮಿಳಾರವರು ಇಂದು ಬೆಳಿಗ್ಗೆ ತಮ್ಮ ಪತಿ ಸುರೇಶ್ ದೇವಾಡಿಗರೊಂದಿಗೆ ಬೈಕ್ ನಲ್ಲಿ ಹೇರೂರಿನಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.
ಇವರು ಕುರ್ಕಾಲು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಮುಂದಿನಿಂದ ಹೋಗುತ್ತಿದ್ದ ಬೈಕ್ ಸವಾರ ತನ್ನ ಬೈಕ್ ನ್ನು ಯಾವುದೇ ಸೂಚನೆ ನೀಡದೆ ಎಡಭಾಗಕ್ಕೆ ತಿರುಗಿಸಿದ. ಅದರ ಪರಿಣಾಮ ಇವರ ಬೈಕ್ ಮುಂದಿನ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ರಸ್ತೆಗೆ ಬಿದ್ದ ಶರ್ಮಿಳಾ ಅವರು ಗಂಭೀರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗೊಂಡು ತನಿಖೆ ಚುರುಕುಗೊಂಡಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ