ದೇಶದಲ್ಲಿ ರೈತ ಸಮುದಾಯ ಹಾಗೂ ರೈತ ಸಂಘಟನೆಗಳ ಹಾಗೂ ಪ್ರತಿಪಕ್ಷಗಳ ಭಾರೀ ವಿರೋಧ ಹಾಗೂ ವಿವಾದಕ್ಕೆ ಗುರಿಯಾಗಿದ್ದ ಕೃಷಿ ಕಾಯ್ದೆಯನ್ನು ಕೇಂದ್ರ ಸರಕಾರ ವಾಪಾಸ್ ಹಿಂದಕ್ಕೆ ಪಡೆದಿದ್ದು, ಈ ಬಗ್ಗೆ ಕೇಂದ್ರ, ರಾಜ್ಯ ಖಾತೆ ಕೃಷಿ ಸಚಿವೆ ಶೋಭಾ ಕರಂದ್ಲಾಂಜೆ ಉತ್ತರಿಸದೆ ನಿರುತ್ತರರಾಗಿ ಹಿಂದುರುಗಿದ್ದಾರೆ.
ಉಡುಪಿಗೆ ಆಗಮಿಸಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದ ಸಚಿವೆ ಶೋಭಾ ಅವರಲ್ಲಿ ರೈತರಿಗೆ ಸಂಬಂಧಪಟ್ಟ ಕೃಷಿ ಕಾಯ್ದೆ ಹಿಂಪಡೆದಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದ್ದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸದೇ ನಿರುತ್ತರರಾಗಿ ನಡೆದಿದ್ದಾರೆ.
ಇದಲ್ಲದೆ ಬಿಟ್ ಕಾಯಿನ್ ಪ್ರಕರಣ, ವಿಧಾನ ಪರಿಷತ್ ಚುನಾವಣೆ ಮತ್ತಿತರ ವಿಷಯದ ಕುರಿತು ಸಚಿವೆ ಶೋಭಾ ಪ್ರಸ್ತಾಪ ಮಾಡಿದ್ದು, ಈ ಹಿಂದೆ ಪ್ರತಿಭಟನಾ ನಿರತ ರೈತರ ಕುರಿತಾಗಿ ಮಾತನಾಡುತ್ತಿದ್ದ ಅವರು ಇಂದು ಸುದ್ದಿಗಾರರ ಮಾತಿಗೆ ಪ್ರತಿಕ್ರಿಯಿಸದೇ ಮೌನವಾಗಿ ಮುನ್ನಡೆದಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ