ಪುತ್ತೂರು: ತನ್ನ ಪ್ರೀತಿಯನ್ನು ಬಚ್ಚಿಟ್ಟು ಇನ್ನೊಬ್ಬ ಯುವತಿಯ ಜೊತೆ ನಿಶ್ಚಿತಾರ್ಥಕ್ಕೆ ತಯಾರಾಗಿದ್ದ ಯುವಕನೊಬ್ಬ ತನ್ನ ಸಹೋದರನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ.
ಮೃತನ ಕುರಿತು ಮೃತ ಯುವಕನನ್ನು ಸುಳ್ಯಪದವು ಮೂಲದ ಶಬರಿನಗರ ನಿವಾಸಿ ಕೂಸಪ್ಪ ಪೂಜಾರಿ ಅವರ ಪುತ್ರ ರವಿರಾಜ್ (31) ಎಂದು ತಿಳಿದುಬಂದಿದೆ.
ರವಿರಾಜ್ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಕುಂದಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸದೆ ಗುಪ್ತವಾಗಿಟ್ಟಿದ್ದ. ಆದರೆ ಈ ನಡುವೆ ರವಿರಾಜ್ ಮನೆಯವರು ವಿಟ್ಲದ ಯುವತಿಯೊಂದಿಗೆ ವಿವಾಹ ಸಂಬಂಧ ಮಾತುಕತೆ ನಡೆಸಿದ್ದರು.
ಇನ್ನೆರಡು ದಿನಗಳಲ್ಲಿ ನಿಶ್ಚಿತಾರ್ಥಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಕುಂದಾಪುರ ಯುವತಿ ಕಡೆಯವರು ವಿವಾಹ ಕಾರ್ಯ ನಡೆಸಲು ಭಾನುವಾರ ತನ್ನ ಮನೆಗೆ ದಿಬ್ಬಣದೊಂದಿಗೆ ಬರಲು ತೀರ್ಮಾನಿಸಿರುವ ವಿಚಾರವನ್ನು ಅರಿತ ರವಿರಾಜ್ ನವೆಂಬರ್ 19 ರಂದು ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿದ್ದರು. ನವೆಂಬರ್ 21ರಂದು ಸಂಜೆ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು.
ಇತ್ತಾ ರವಿರಾಜ್ ಅವರನ್ನು ವಿವಾಹವಾಗಲೆಂದು ನವೆಂಬರ್ 21 ರಂದು ಕುಂದಾಪುರದಿಂದ ಹುಡುಗಿಯ ಮನೆ ದಿಬ್ಬಣ ದಿಢೀರ್ ಬಂದಾಗ ಆತಂಕಕ್ಕೊಳಗಾದ ಮನೆಯವರು ರವಿರಾಜ್ ಅವರನ್ನು ಹುಡುಕಾಡಿದ್ದಾರೆ. ಆದರೆ, ಆ ವೇಳೆ ರವಿರಾಜ್ ಮನೆಯಲ್ಲಿರಲಿಲ್ಲ. ಇದರಿಂತ ಆತಂಕಗೊಂಡ ಮನೆಯವರು ಹುಡುಕಾಟ ಮುಂದುವರಿಸಿದ್ದಾರೆ.
ಇ ವೇಳೆ ನೆಟ್ಟಣಿಗೆ ಮುಡ್ನೂರುಗ್ರಾಮದ ಈಶ್ವರಮಂಗಲ ಕರೆಂಟಿಯಡ್ಕದಲ್ಲಿ ವಿದೇಶದಲ್ಲಿರುವ ರವಿರಾಜ್ ಅವರ ಸಹೋದರನು ನೂತನವಾಗಿ ನಿರ್ಮಾಸುತ್ತಿರುವ ಇನ್ನೂ ಗೃಹಪ್ರವೇಶವಾಗದ ಹೊಸ ಮನೆಯ ಬಚ್ಚಲು ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಘಟನಾ ಸ್ಥಳಕ್ಕೆ ಆಗಮಿಸಿದ ಈಶ್ವರಮಂಗಲ ಹೊರಠಾಣೆಯ ಎ.ಎಸ್.ಐ ಜಗನ್ನಾಚಾರ್ಯ ಅವರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಆತ್ಮಹತ್ಯೆಯ ಕುರಿತು ರವಿರಾಜ್ ಅವರ ತಂದೆ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಗತಿಯಲ್ಲಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ