ಉಡುಪಿ:-ಇತ್ತೀಚೆಗೆ ಪೇಜಾವರ ಶ್ರೀ ಅವರ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆಗೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಕಿದಿಯೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಯಿಲಾಡಿ ಪ್ರಮೋದ್ ಮಧ್ವರಾಜ್ ಮೋದಿಯವರನ್ನು ಹೊಗಳಿದ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕೊನೆಗೂ ಅವರು ಬಿಜೆಪಿ ಪಕ್ಷದ ಮತ್ತು ನಾಯಕರ ಒಳ್ಳೆಯ ವಿಚಾರಗಳನ್ನ ಸ್ವೀಕಾರ ಮಾಡಲು ಶುರು ಮಾಡಿದ್ದಾರೆ. ಇದು ಒಳ್ಳೆಯ ವಿಚಾರ. ಬಿಜೆಪಿಗೆ ಬರುತ್ತಾರೋ ಇಲ್ಲವೋ ಅಂತ ಅವರು ಆಲೋಚನೆ ಮಾಡಬೇಕಾಗಿದೆ. ಅವರು ಬರುವಾಗ ಬರಬೇಕೋ ಬೇಡವೂ ಅಂತ ನಾವು ಆಲೋಚನೆ ಮಾಡುತ್ತೇವೆ. ಏಕೆಂದರೆ ನಮಗೆ ಈ ಹಿಂದೆ ಅನುಭವ ಆಗಿದ್ದು ದನ ಬಂದರೆ, ಕರು ಬರುತ್ತೇನೆ ಅಂದಿದ್ದರು. ಹೀಗಾಗಿ ಅವರ ಮಾನಸಿಕತೆ ಗೊತ್ತಾಗ್ತಿಲ್ಲ.ನಮ್ಮ ಪಕ್ಷ ಸಿದ್ದಾಂತವನ್ನು ಒಪ್ಪಿ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಆದರೆ ಅವರ ನಿಲುವುಗಳಲ್ಲಿ ಪದೇ ಪದೇ ಬದಲಾವಣೆ ಆಗುತ್ತಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ. ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕಿದ್ದರೆ, ಸ್ಥಳಿಯ ಕಾರ್ಯಕರ್ತರಲ್ಲಿ, ಸ್ಥಳೀಯ ನಾಯಕರಲ್ಲಿ ಚರ್ಚೆ ಮಾಡಬೇಕು. ಹಾಗೆ ಏಕಾಏಕಿ ಬರಮಾಡಿಕೊಳ್ಳಲು ಆಗುವುದಿಲ್ಲ. ನಮ್ಮ ಕಾರ್ಯಕರ್ತರೂ ಅವರಿಗೆ ಬೇಜಾರು ಮಾಡಿರಬಹುದು, ಆದರೆ ಪಕ್ಷಕ್ಕೆ ಬರುವುದಕ್ಕೆ ವಿರೋಧವಿಲ್ಲ. ನಮ್ಮ ವರಿಷ್ಠರು ನಿರ್ಧಾರವಾಗಬೇಕು. ಎಲ್ಲವೂ ಚರ್ಚೆ ಆಗಬೇಕು ಎಂದು ಹೇಳಿದ್ದಾರೆ
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ