ಚೊಚ್ಚಲ ಬಾರಿಗೆ ಟಿ-ಟ್ವೆಟಿಂ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಗೆದ್ದ ಸಂಭ್ರಮದಲ್ಲಿ ಆಟವಾಡಿದ ಶೂವಿಗೆ ಬಿಯರ್ ತುಂಬಿಸಿ ಕುಡಿದ ಘಟನೆ ನಡೆದಿದೆ.
ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾನುವಾರದಂದು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಮತ್ತು ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ‘ಶೂ’ ಒಳಗೆ ಬಿಯರ್ ಹಾಕಿಕೊಂಡು ಕುಡಿಯುವುದು ಈಗ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋ ವೀಕ್ಷಿಸಿ:-
ಆಸ್ಟ್ರೇಲಿಯನ್ ಫಾರ್ಮುಲಾ ಒನ್ ಚಾಲಕ ಡೇನಿಯಲ್ ರಿಕಿಯಾರ್ಡೊ ಅವರು ಈ ಆಚರಣೆಯನ್ನು ಮೊದಲು ಶುರು ಮಾಡಿದ್ದು, ಅವರು 2016 ರ ಜರ್ಮನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ವೇದಿಕೆಯ ಮೇಲೆ ಮೊದಲ ಬಾರಿಗೆ ಈ ರೀತಿ ಮಾಡಿದ್ದರು, ಅಂದಿನಿಂದ ಇದು ಜನಪ್ರಿಯವಾಗಿದೆ.
ಒಂದು ರೀತಿಯಲ್ಲಿ ಈ ಆಚರಣೆ ಆಸ್ಟ್ರೇಲಿಯಾದ ಸಂಪ್ರದಾಯವೆಂದೇ ಹೇಳಲಾಗುತ್ತಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ