:-ಶಾಲಾ ಶಿಕ್ಷಕಿ ಆತ್ಮಹತ್ಯೆ ಅಲೆವೂರಿನ ನಿವಾಸಿ ಅಮೃತಾ(32) ಎಂದು ತಿಳಿದುಬಂದಿದ್ದು ವೃತ್ತಿಯಲ್ಲಿ ಈಕೆ ಶಿಕ್ಷಕಿ ಎಂದು ತಿಳಿದುಬಂದಿದೆ. ಇವರು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿಯಾಗಿದ್ದು, ಕಳೆದ ಎಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇವರು ಕಾಣಿಯೂರು ಮಠದ ಮ್ಯಾನೇಜರ್ ಅವರ ಪತ್ನಿ ಎಂದು ತಿಳಿದುಬಂದಿದೆ.
ಇತ್ತೀಚಿನ ಕಳೆದ ಕೆಲವು ದಿನಗಳಿಂದ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು ಎಂದುತಿಳಿದು ಬಂದಿದ್ದು ಈ ಕಾರಣದಿಂದ ನ. 21ರಂದು ರಾತ್ರಿ ತನ್ನ ಮನೆಯಲ್ಲಿ ನೇಣಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಮ್ಮ ಪತಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ