ಕುಂದಾಪುರ: ಕೊಡಿಹಬ್ಬಕ್ಕೆ ಇನ್ನೇನು ಬೆರಳೆಣಿಕೆಯ ದಿನಗಳಿದ್ದು ಕೊಟೇಶ್ವರ ಗ್ರಾಮದ ಕೋಟಿಲಿಂಗೇಶ್ವರ ದೇವಸ್ಥಾನದ 2021ನೇ ಸಾಲಿನ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ನವೆಂಬರ್ 18-20ರವರೆಗೆ ನಡೆಯಲಿದೆ.
ಜನರು ಭಾಗವಹಿಸುವ ಸಾಧ್ಯತೆ
ವಾರ್ಷಿಕವಾಗಿ ಜರುಗುವ ರಥೋತ್ಸವದಲ್ಲಿ ಸುಮಾರು 50 ರಿಂದ 60 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಸಂಚಾರ ನಿಯಂತ್ರಣದ ದೃಷ್ಟಿಯಿಂದ ವಾಹನಗಳು ಪಾರ್ಕಿಂಗ್ ಗೆ ಸ್ಥಳ ಗುರುತಿಸಿ ಸರಿಯಾದ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಪೋಲೀಸ್ ಇಲಾಖೆ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದು , ಬರುವ ಭಕ್ತಾದಿಗಳ ವಾಹನಗಳ ನಿಲುಗಡೆ ವ್ಯವಸ್ಥೆಗೆ ಈಗಾಗಲೇ ಪೋಲಿಸ್ ಇಲಾಖೆ ಗುರುತಿಸಿದ ನಿಗಧಿತ ವಿವಿಧ ಸ್ಥಳಗಳ ವಿವರ ಈ ಕೆಳಗಿನಂತಿವೆ.
ಗೋಪಾಡಿ, ಬೀಜಾಡಿ ಕಡೆಯಿಂದ ಬರುವ ವಾಹನಗಳಿಗೆ ಗುರುಪ್ರಸಾದ್ ಹೊಟೇಲ್ ಸಮೀಪ ಕೊಟೇಶ್ವರ , ಆರ್ಯ ಹೊಟೇಲ್ ಬಳಿ ಕೋಟೇಶ್ವರ ಮತ್ತು ಸಹನಾ ಹೋಟೆಲ್ ಪಾರ್ಕಿಂಗ್ ಅಂಕದಕಟ್ಟೆ ಕೊಟೇಶ್ವರ ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಕುಂಭಾಶಿ, ತೆಕ್ಕಟ್ಟೆ, ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಹೈಸ್ಕೂಲ್ ಬಳಿ ಕೋಟೇಶ್ವರ , ಕೋಸ್ಟಲ್ ಕ್ರೋನ್ ಕಾಂಪ್ಲೆಕ್ಸ್ ಬಳಿ ಕೋಟೇಶ್ವರ, ಜೂನಿಯರ್ ಕಾಲೇಜು ಹಿಂಭಾಗ ಕೋಟೇಶ್ವರ , ಮತ್ತು ಮಹಾಲಕ್ಷ್ಮಿ ಶೋ ರೂಮ್ ಬಳಿ ಕೋಟೆಶ್ವರದಲ್ಲಿ ಈ ಕಡೆಗಳಿಂದ ಬರುವ ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಗೋಪಾಡಿ , ಬೀಜಾಡಿ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಕೋಟೇಶ್ವರ ನೀರಿನ ಟ್ಯಾಂಕ್ ಬಳಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ