ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಸುರತ್ಕಲ್ ಜಂಕ್ಷನ್‌ಗೆ ಸಾವರ್ಕರ್ ಹೆಸರಿಡುವ ಕುರಿತು ಯು.ಟಿ.ಖಾದರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಾವರ್ಕರ್ ಹೆಸರಿಡುವ ಕುರಿತು ಚರ್ಚೆ ಮಾಡುವ ಅವಶ್ಯಕತೆ ಏನಿದೆ, ಸಾವರ್ಕರ್ ನಮ್ಮ ಸ್ವಾಭಿಮಾನದ ಸಂಕೇತ, ಖಾದರ್ ಸಾವರ್ಕರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ, ಖಾದರ್ ಬೇಕಾದರೆ ಗೋಕಳ್ಳರ ಬಗ್ಗೆ ಮಾತನಾಡಲಿ ಎಂದರು.
ಸಾವರ್ಕರ್ ವಿಚಾರದಲ್ಲಿ ಖಾದರ್‌ರಿಂದ ಪಾಠ ಕಲಿಯುವ ಅವಶ್ಯಕತೆಯಿಲ್ಲ. ಅವರು ಅಂಡಮಾನ್ ಜೈಲಿಗೆ ಹೋಗಿ ನೋಡಿ ಬರಲಿ, ಗೋಕಳ್ಳರನ್ನು ಬಿಡಿಸಲು ಜೈಲಿಗೆ ಹೋದವರಿಗೆ ಏನು ಗೊತ್ತು ಎಂದು ಯು.ಟಿ.ಖಾದರ್ ವಿರುದ್ಧ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ