ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಡ್ರಗ್ಸ್ ಪ್ರಕರಣ ಇದೀಗ ಮತ್ತೆ ಸದ್ದು ಮಾಡಿದೆ. ಈ ಸಂಬಂಧ ಮಂಗಳೂರಿನ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಾರ್ಟಿನ್ ಶಾಜಿ, ರುತಿನ್, ಆಕಾಶ್ ಕಣ್ಣೂರು, ಅಕ್ಷಯ್, ಹರಿಕೃಷ್ಣನ್, ಬಂಧಿತ ಆರೋಪಿಗಳಾಗಿದ್ದು, ಎಲ್ಲರೂ ಕೇರಳ ಮೂಲದವರಾಗಿದ್ದಾರೆ.
ಬಂಧಿತರ ಮೇಲೆ ಡ್ರಗ್ಸ್ ಸೇವನೆಯ ಆರೋಪ ಇದ್ದು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಪೊಲೀಸರು ರಾತ್ರಿ ಹೊತ್ತು ಗತ್ತು ಸುತ್ತುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ