ಉಡುಪಿ:-ಮನೆಯ ಬಾಗಿಲಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಉಡುಪಿಯ ಗುಂಡಿಬೈಲು ಎಂಬುವಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಮನೆಯ ಕಪಾಟಿನಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಕಪಾಟಿನಲ್ಲಿದ್ದ ಬೀಗದಿಂದ ಲಾಕರ್‌ತೆಗೆದು ಅದರಲ್ಲಿದ್ದ 12 ಗ್ರಾಂ ತೂಕದ ಚಿನ್ನದ ತೆಂಡುಲ್ಕರ್‌ಚೈನ್ , 3 ಗ್ರಾಂ ತೂಕದ ಚಿನ್ನದ ಪವಿತ್ರ ಉಂಗುರ -1 , 24 ಗ್ರಾಂ ತೂಕದ ಕಾಶಿತಾಳಿ ಉಂಗುರ ಸರ -1,22 ಗ್ರಾಂ ತೂಕದ ಪೆಂಡೆಂಟ್‌ಇರುವ ಮುತ್ತಿನ ಸರ -1,26 ಗ್ರಾಂ ತೂಕದ ಚಿನ್ನದ ಬಳೆಗಳು -2 , 3 ಗ್ರಾಂ. -1 ಸಹಿತ ಒಟ್ಟು 90 ಗ್ರಾಂ ತೂಕದ 3,60,000 / - ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ .
ಜೊತೆಗೆ , ಬೆಳ್ಳಿ ಹರಿವಾಣ -1 , ಬೆಳ್ಳಿ ತೋಟ -1 , ಬೆಳ್ಳಿ ಕವಳಿಕೆ ಸೌಟು -1 ಒಟ್ಟು ರೂ .10,000 ಮೌಲ್ಯದ ಬೆಳ್ಳಿ ಸಾಮಾಗ್ರಿಗಳ ಜೊತೆಗೆ ದೇವರ ಡಬ್ಬದಲ್ಲಿದ್ದ ಅಂದಾಜು ರೂ .400 / - ಮತ್ತು ಪಿರ್ಯಾದುದಾರರ ಅಣ್ಣನ ಜಾಗದ ಮೂಲ ದಾಖಲೆಗಳನ್ನು ಕಳವು ಮಾಡಿದ್ದಾರೆ . ಒಟ್ಟು ಮೌಲ್ಯ 3,70,400 ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ