ಉಡುಪಿ : ಜಿಲ್ಲೆಯ ಗೋಳಿಹೊಳೆ ಗ್ರಾಮದ ಹಿಲ್ಲಾರು ಎಂಬಲ್ಲಿ ತನ್ನ ಪತ್ನಿಯ ಮನೆಯಲ್ಲಿ ವಾಸವಾಗಿದ್ದ ಸುಧಾಕರ ಗೌಡ (49) ಎಂಬವರು ಕಳೆದ ಬುಧವಾರ ತಮ್ಮ ಅಳಿಯನ ಜೊತೆ ಬೈಕ್ ನಲ್ಲಿ ಮನೆಯಿಂದ ತೆರಳಿದ್ದರು. ಇಲ್ಲಿಯ ತನಕ ಅವರು ಸುಳಿವಿರಲಿಲ್ಲ.
ಆದರೆ ಇಂದು ಸುಧಾಕರ ಅವರು ಶವ ಮನೆಯ ಹತ್ತಿರದ ಮಂಜು ಪೂಜಾರಿ ಎಂಬವರ ಬಾವಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ದೂರು ನೀಡಿರುವ ಸುಧಾಕರ ಅವರ ಸಹೋದರ ಕಾಲ್ತೋಡಿನ ಮಾಸ್ತಿಗೌಡ ಎಂಬವರು ತಮ್ಮನಾದ ಸುಧಾಕರ ಸಾವಿನ ಕುರಿತು ನಮಗೆ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೋಲಿಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಕುರಿತು ಪ್ರಕರಣ ದಾಖಲುಗೊಂಡು ತನಿಖೆ ನಡೆಯುತ್ತಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ