Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಕಾರ, ಜಿಲ್ಲಾಧಿಕಾರಿ ಭೇಟಿ- ಮನವೊಲಿಕೆ

ಉಡುಪಿ: ಕೊವೀಡ್ 19 ಗೆ ಕಡಿವಾಣ ಹಾಕುವ ನಿಮಿತ್ತ ಕೆರೊಲಿನಾ ಲಸಿಕೆ ದೇಶದಾದ್ಯಂತ ನೀಡುತ್ತಿದ್ದು, ಲಸಿಕೆ ಹಾಕಿಸಿಕೊಳ್ಳಬೇಕು ಆದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದ ಒಂದೇ ಕುಟುಂಬದ ಏಳು ಮಂದಿಯನ್ನು ಸ್ವತಃ ಉಡುಪಿ ಜಿಲ್ಲಾಧಿಕಾರಿಯವರೇ ಆಗಮಿಸಿ ಮನವೊಲಿಸಿದ್ದಾರೆ.
ಉಡುಪಿ ಜಿಲ್ಲೆಯ  ಬ್ರಹ್ಮಾವರ ತಾಲೂಕಿನ ಸಾಯಿಬ್ರಕಟ್ಟೆಯ ಕಾಜ್ರಲ್ಲಿ ಕಾಲನಿಯಲ್ಲಿ ವಾಸವಾಗಿರುವ ಒಂದೇ ಕುಟುಂಬದ ಏಳು ಸದಸ್ಯರು ಅಪನಂಬಿಕೆಯಿಂದಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದು, ಕೊರೊನಾ ಲಸಿಕೆಯಿಂದ ಜೀವಕ್ಕೆ ಅಪಾಯವಾಗಲಿದೆ ಎಂದು ಕುಟುಂಬದವರು ಭಯಪಟ್ಟಿದ್ದರು.

ಕೊರೊನಾ ಶುರುವಾದ  ಆರಂಭದಲ್ಲಿ ಕುಟುಂಬದ ಸದಸ್ಯನೋರ್ವ ಸಾವನ್ನಪ್ಪಿದಾಗ ಆಡಳಿತ ವ್ಯವಸ್ಥೆ ಹಾಗೂ ಊರಿನವರು ತಿರಸ್ಕಾರದ ಮನೋಭಾವವನ್ನು ತೋರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆದ್ದರಿಂದ, ಆಶಾ ಕಾರ್ಯಕರ್ತೆಯರು, ವೈದ್ಯರು, ಸ್ಥಳೀಯ ಜನಪ್ರತಿನಿಧಿಗಳು ಎಷ್ಟು ಪ್ರಯತ್ನ ಮಾಡಿದರೂ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆ ಶನಿವಾರ ಸಾಯಿಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ಈ ಕುಟುಂಬದ ಬಗ್ಗೆ ಮಾಹಿತಿ ತಿಳಿದು ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಮನೆಯವರ ಸಮಸ್ಯೆ ಹಾಗೂ ನೋವುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ನಿಮಗೆ ಯಾವುದೇ ಸಮಸ್ಯೆಯಾದಲ್ಲಿ ಜಿಲ್ಲಾಡಳಿತ ರಕ್ಷಣೆ ನೀಡಲಿದೆ. ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು. ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದ್ದಾರೆ. ಬಳಿಕ ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ಲಸಿಕೆ ಪಡೆಯುವುದಾಗಿ ಭರವಸೆ ನೀಡಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo