Slider


ಉಡುಪಿ/ದ.ಕ:-ಮಳೆ ಎಫೆಕ್ಟ್:- ನೂರು ದಾಟಿದ ಟೊಮೆಟೊ ದರ

ಮಳೆ ಎಫೆಕ್ಟ್:- ನೂರು ದಾಟಿದ ಟೊಮೆಟೊ ದರ

ಮಳೆ ಹಾನಿಯಿಂದ ನಿರಂತರವಾಗಿ ಏರಿಕೆ ಕಂಡಿರುವ ಟೊಮೆಟೊ ದರ ನೂರರ ಗಡಿ ದಾಟಿದೆ. ಚಿಲ್ಲರೆ ಹಾಗೂ ಹಾಪ್‌ಕಾಮ್ಸ್‌ನಲ್ಲೂ ಟೊಮೆಟೊ ಕೆ.ಜಿಗೆ ₹100 ಹಾಗೂ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ತರಕಾರಿಗಳ ದರ 15 ದಿನಗಳಿಂದ ಏರಿಕೆ ಕಂಡಿವೆ.
ಎರಡು ದಿನಗಳ ಹಿಂದೆ ಟೊಮೆಟೊ ದರ ₹70ರಷ್ಟಿತ್ತು. ಸೋಮವಾರದ ವೇಳೆಗೆ ದರ ದಿಢೀರ್ ಏರಿದ್ದು, ಚಿಲ್ಲರೆ ಮಳಿಗೆಗಳಲ್ಲಿ ಕೆ.ಜಿ.ಗೆ ₹150ರಂತೆ ಮಾರಾಟವಾಗಿದೆ. ಹಾಪ್‌ಕಾಮ್ಸ್‌ನಲ್ಲೂ ಟೊಮಟೊ ದರ ₹100ಕ್ಕೆ ಏರಿದೆ.

ಕೇವಲ ಟಮ್ಯಾಟೋ ದರ ಮಾತ್ರವಲ್ಲದೆ ಎಲ್ಲ ತರಕಾರಿ ದರಗಳು ಗಣನೀಯವಾಗಿ ಏರುತ್ತಿವೆ. ₹10ರಷ್ಟಿದ್ದ ಬದನೆಕಾಯಿ ದರ ₹70ಕ್ಕೇರಿದೆ. ಸೊಪ್ಪಿನ ದರಗಳೂ ಗಗನಮುಖಿಯಾಗಿವೆ. ಧಾರಾಕಾರ ಮಳೆಯಿಂದ ಮಾರುಕಟ್ಟೆಗಳಲ್ಲಿ ತರಕಾರಿಗಳ ಅಭಾವ ಸೃಷ್ಟಿಯಾಗಿದೆ. ಇದರಿಂದಲೇ ದರ ದುಪ್ಪಟ್ಟಾಗುತ್ತಿದೆ. ಸದ್ಯಕ್ಕೆ ಮಳೆ ಬಿಡುವು ಕೊಟ್ಟಿದೆ.
ವರದಿ:-ಉಡುಪಿ ಫಸ್ಟ್
  

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo