ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಟುಡಿಯೋ ಒಂದರಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು ಕಂಡುಬಂದಿದೆ.
ಕುಂದಾಪುರದ ಹೊಸ ಬಸ್ ನಿಲ್ದಾಣ ಬಳಿಯ ಸೈಂಟ್ ಅಂತೋನಿ ಸ್ಟುಡಿಯೊ ಒಂದರಲ್ಲಿ ನಿನ್ನೆ ತಡರಾತ್ರಿ ಮೇಲ್ಛಾವಣಿಯ ಹೆಂಚು ಸರಿಸಿ ಒಳಗೆ ಬಂದ ಕಳ್ಳ ಸ್ಟುಡಿಯೋ ಡ್ರಾವರ್ ನಲ್ಲಿದ್ದ ನಗದು, ಪೆನ್ ಡ್ರೈವ್ ಕದ್ದು ಪರಾರಿಯಾಗಿದ್ದಾನೆ.
ಇ ಸಂದರ್ಭದಲ್ಲಿ ಕಳ್ಳತನ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ಸ್ಟುಡಿಯೋ ಬಳಿ ಪತ್ತೆಯಾಗಿದೆ. ಸ್ಟುಡಿಯೋ ದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳನದ ಕೃತ್ಯ ಸೆರೆಯಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಕಾರ್ಯಚರಣೆ ಮುಂದುವರೆಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ