Slider

ಉಡುಪಿ:-ಮಣಿಪಾಲ ಸೇರಿದಂತೆ ನಗರದ ಹಲವು ಕಡೆ ಅತ್ಯಾಧುನಿಕ ತಂತ್ರಜ್ಞಾನದ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ

ಉಡುಪಿ:-ನಗರದ ಹಲವೆಡೆಯ ಜನರು ಅನುಭವಿಸುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ‌ಹಾಗೂ ವಾಹನ ದಟ್ಟಣೆಗೆ ಶೀಘ್ರ ಮುಕ್ತಿ ದೊರೆಯಲಿದೆ.
ಇನ್ನುಮುಂದೆ ಜನರು ನಿರಾಯಾಸವಾಗಿ ವಾಹನ ದಟ್ಟಣೆಯಿಂದ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಸುಗಮ ಸಂಚಾರಕ್ಕೆ ಅತ್ಯಾಧುನಿಕ ಸಿಗ್ನಲ್ ಲೈಟ್ ಸ್ಥಾಪಿಸಲಾಗಿದ್ದು, ಪ್ರಾಯೋಗಿಕವಾದ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ಪೂರ್ಣ ವಾಗಿ ಕಾರ್ಯಾಚರಿಸಲಿದೆ.ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಸಿಗ್ನಲ್ ಅಳವಡಿಸಬೇಕು ಎನ್ನುವುದು ಸಾರ್ವಜನಿಕರ ಹಲವಾರು ಸಮಯದ ಬೇಡಿಕೆಯೂ ಹೌದು. ಹೀಗಾಗಿ ನಗರದ ಒಟ್ಟು 12 ಪ್ರಮುಖ ಜಂಕ್ಷನ್ ಗಳಲ್ಲಿ ಸಿಗ್ನಲ್ ಲೈಟ್ಸ್ ಅಳವಡಿಸಲಾಗುತ್ತದೆ

ಒಟ್ಟು ಉಡುಪಿಯಲ್ಲಿ ೧೨ ಕಡೆ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಅವುಗಳು ಈ ಕೆಳಗಿನಂತಿದೆ.

ಉಡುಪಿಯ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಲ್ಸಂಕ ಜಂಕ್ಷನ್, ಹಳೆ ಡಯಾನಾ ಸರ್ಕಲ್, ಜೋಡುಕಟ್ಟೆ ಜಂಕ್ಷನ್, ಬನ್ನಂಜೆ ನಾರಾಯಣ ಗುರು ಮಂದಿರದ ಬಳಿ ಇರುವ ಜಂಕ್ಷನ್, ಶಿರಿಬೀಡು ಜಂಕ್ಷನ್, ಕರಾವಳಿ ಜಂಕ್ಷನ್, ಅಂಬಾಗಿಲು ಜಂಕ್ಷನ್, ಟೈಗರ್ ಸರ್ಕಲ್, ಕುಂಜಿಬೆಟ್ಟುವಿನ ಎಮ್ ಜಿ ಎಮ್ ಕಾಲೇಜು ಎದುರಿನ ಜಂಕ್ಷನ್ ಮತ್ತು ಎಂಐಟಿ ಜಂಕ್ಷನ್.

ಇವುಗಳು ಅತ್ಯಾಧುನಿಕ ತಂತ್ರಜ್ಞಾನದ ಸಿಗ್ನಲ್‌ಗಳಾಗಿದ್ದು, ಸಿಗ್ನಲ್ ಕಂಬಗಳಲ್ಲಿ ಟಿವಿ ಡಿಸ್‌ಪ್ಲೇ ಅಳವಡಿಸಲಾಗಿದೆ.ವಾಹನಗಳು ಸಿಗ್ನಲ್‌ಗಳಲ್ಲಿ ನಿಂತಾಗ ರಸ್ತೆ ಸುರಕ್ಷತೆ ಆರೋಗ್ಯ ಸಂಬಂಧಿ ಜಾಗೃತಿ ಸಹಿತ ಕಮರ್ಷಿಯಲ್ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತದೆ.

ವರದಿ:-ಉಡುಪಿ ಫಸ್ಟ್
1

Mega Menu

blogger
© all rights reserved
made with by templateszoo