ಕುಂದಾಪುರ ನಗರದಿಂದ ಆನಗಳ್ಳಿಗೆ ತೆರಳುವ ಚಿಕನ್ ಸ್ಟಾಲ್ ರಸ್ತೆ ಬಳಿಯ ಚಿಕ್ಕಮ್ಮ ದೇವಸ್ಥಾನದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.ಇ ಕುರಿತು ತುರ್ತು ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದ ಇಲಾಖೆ ಗಮನ ಹರಿಸಬೆಕಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಕುಂದಾಪುರ ಪುರಸಭೆ ಯು ಈ ರಸ್ತೆಗೆ ಕಾರ್ಯಕಲ್ಪ ಮಾಡಲು ನಿರ್ಧರಿಸಿ ರಸ್ತೆಗೆ ಮರು ಡಾಂಬರಿಕರಣ ಮಾಡಲಾಗಿತ್ತು. ಈ ಕಾಮಗಾರಿ ನಡೆದ ಕೆಲವೆ ದಿನಗಳಲ್ಲಿ ರಸ್ತೆಯ ಎಲ್ಲೆಂದರಲ್ಲಿ ಗುಂಡಿ ಬಿದ್ದು ರಸ್ತೆ ಹದಗೆಟ್ಟು ಹೋಗಿದೆ.
ಈ ರಸ್ತೆಯ ಅವೈಜ್ಞಾನಿಕ ಕಾಮಗಾರಿ ಇಂದ ನಿತ್ಯ ಸಂಚರಿಸುವ ಪಾದಚಾರಿಗಳು ಮತ್ತು ವಾಹನ ಸವಾರರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಥಳಿಯರು ಈ ಸಮಸ್ಯೆಯನ್ನು ಮನಗಂಡು ಕುಂದಾಪುರ ಪುರಸಭೆಯ ಅಧಿಕಾರಿಗಳು ಈ ಬಗ್ಗೆ ಶೀಘ್ರವೇ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ