ಉಪ್ಪಿನಕುದ್ರು ವ್ಯಾಪ್ತಿಯ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯು 'ಚೂಡಮಣಿ- ಲಂಕಾ ದಹನ' ಎನ್ನುವ ಪ್ರಸಂಗ ಜನರು ಸಮ್ಮುಖದಲ್ಲಿ ಪ್ರದರ್ಶಿಸಿತು. ಯಕ್ಷಗಾನ ಪಾತ್ರಧಾರಿಯಂತೆ ವೇಷ ತೊಟ್ಟ ಗೊಂಬೆಗಳನ್ನು ಸೂತ್ರದ ಮುಖೇನ ಕುಣಿಸಿದ ಸೂತ್ರಧಾರ ಈ ಸಂದರ್ಭದಲ್ಲಿ ಪ್ರತಿ ಗೊಂಬೆ ಕುಣಿತಕ್ಕೆ ಹೊಂದುವಂತೆ ವಿವರಣೆ ನೀಡುತ್ತಿದ್ದರು.
ಗೊಂಬೆ ಕುಣಿತದ ವೇದಿಕೆಯಲ್ಲಿದ್ದ ಭಾಗವತರು ಗೊಂಬೆಗಳ ಕುಣಿತಕ್ಕೆ ತಕ್ಕಂತೆ ಯಕ್ಷಗಾನ ಪದ್ಯ ಹಾಡುವಾಗ ಚೌಡಿಕೆ , ಮದ್ದಳೆ, ತಾಳ , ಹಾರ್ಮೋನಿಯಂ ಗಳನ್ನು ಒಳಗೊಂಡ ಹಿಮ್ಮೇಳದವರು ಭಾಗವತರಿಗೆ ಸಾಥ್ ನೀಡಿದರು.
ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್
ಮೆಮೊರಿಯಲ್ ಯಕ್ಷಗಾನ ಗೊಂಬೆಯಾಟ ಟೃಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೆವಣ್ಣ ಕಾಮತ್ ಅವರು ಜನ್ಮ ಶತಮಾನೋತ್ಸವದ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದೇ ವೇಳೆ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಮುಖ್ಯಸ್ಥ ಭಾಸ್ಕರ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡೌ, ಬ್ರಹ್ಮಾವರದ ಗೌರವ ಅಧ್ಯಕ್ಷರಾಗಿರುವ ಚಂದ್ರಶೇಖರ್ ಕಲ್ಕೂರ, ಸೋರ್ಪು ಸದಾನಂದ ಪಾಟೀಲ್ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚೇತನ್ ಮಟಪಾಡಿ ಸ್ವಾಗತಿಸಿ ನಿರೂಪಿಸಿದರು. ಶರೋನ್ ಸಿಕ್ವೆರಾ ಕಾರ್ಯಕ್ರಮ ವನ್ನು ವಂದಿಸಿ ಕಾರ್ಯಕ್ರಮಕ್ಕೆ ಅಂತಿಮ ಹಾಡಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ