ಉಡುಪಿ:-ಬಿರುವೆರ್ ಕುಡ್ಲ ವಿರುದ್ಧ ಸುಳ್ಳು ಆರೋಪಿಗಳನ್ನು ಮಾಡಿರುವ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆಯ ಉಡುಪಿ ಘಟಕದ ಮಾಧ್ಯಮ ಸಲಹೆಗಾರ ತೇಜಸ್ ಬಂಗೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿರುವೆರ್ ಕುಡ್ಲ ಸಂಘಟನೆ ಯಾವಾಗ ಹಿಂದೂ ವಿರೋಧಿ ಕೆಲಸ ಮಾಡಿದೆ ಎಂದು ಅವರು ಸಾಕ್ಷಪಡಿಸಲಿ, ಶರಣ್ ಪಂಪ್‌ವೆಲ್ ಹೇಳಿಕೆಯನ್ನು ಬಿರುವೆರ್ ಕುಡ್ಲ ತೀವ್ರವಾಗಿ ಖಂಡಿಸುತ್ತದೆ, ಬಿರುವೆರ್ ಕುಡ್ಲ ಜಾತಿ, ಧರ್ಮ, ಭೇದವನ್ನು ಮರೆತು ಸಮಾಜ ಸೇವೆಯನ್ನು ಮಾಡಿದೆ ಎಂದರು.
ಬಿರುವೆರ್ ಕುಡ್ಲ ದೇಶದ್ರೋಹಿ ಸಂಘಟನೆ ಎಂದು ಅವರು ಹೇಳಿದಂತೆ ಸಾಬೀತುಪಡಿಸಲಿ, ಅದು ಸಾಧ್ಯವಾಗದಿದ್ದರೆ ಏಕೆ ಈ ಹೇಳಿಕೆ ನೀಡಿದರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಶರಣ್ ಪಂಪ್‌ವೆಲ್ ಬಹಿರಂಗ ಕ್ಷಮೆ ಕೇಳದಿದ್ದರೆ ಬಲ್ಲಾಳ್ ಭಾಗ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ