ಕೋಟ : ಉಡುಪಿ ಜಿಲ್ಲೆಯ ಕೋಟ ಹೋಬಳಿ ವ್ಯಾಪ್ತಿಯ ಕೋಡಿ ಕನ್ಯಾನದ ನಾಸಿರ್ ಇವರ ಮಗ ಮುಹಮ್ಮದ್ ನಿಶಾನ್ (14) ಇವನು ಬಾನುವಾರ ಬೆಳಿಗ್ಗೆ 10:00ಗಂಟೆ ಸುಮಾರಿಗೆ ಸ್ನೇಹಿತನ ಮನೆಗೆ ಹೋಗಿ ಅಲ್ಲಿಂದ ಕೋಟ ಪಡುಕರೆ ಎಂಬಲ್ಲಿಗೆ ಆಟ ಆಡಲು ಹೋಗುತ್ತೇನೆ ಎಂದು ಮನೆಯಿಂದ ಸೈಕಲ್ ಏರಿ ಹೊರಟು ಹೋದವನು ನಾಪತ್ತೆ ಆಗಿರುತ್ತಾನೆ.
ಆದರೆ ಇದುವರೆಗೂ ಮನೆಗೆ ವಾಪಾಸು ಬಂದಿರುವ ಸುಳಿವು ದೊರೆತಿಲ್ಲ.
ಮಣೂರು ಪಡುಕೆರೆ ಪ್ರೌಡಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಹುಡುಗ ಸುಮಾರು 4.5 ಅಡಿ ಎತ್ತರ ಉಳ್ಳವರಾಗಿದ್ದು, ಗೋದಿ ಬಣ್ಣ ಮೈಕಟ್ಟು ಹೊಂದಿದ್ದಾನೆ, ಕನ್ನಡ ಹಾಗೂ ಬ್ಯಾರಿ ಭಾಷೆ ಮಾತನಾಡಬಲ್ಲವನಾಗಿದ್ದಾನೆ. ಯಾರಿಗಾದರು ಈ ಹುಡುಗನ ಬಗ್ಗೆ ಸುಳಿವು ಸಿಕ್ಕಿದಲ್ಲಿ ದಯವಿಟ್ಟು 9880897535 ಈ ಸಂಖ್ಯೆಗೆ ಕರೆ ಮಾಡಿ ಸಹಕರಿಸಿ.
ಕೋಟ ಆರಕ್ಷಕ ಠಾಣೆಯಲ್ಲಿ ನಾಪತ್ತೆ ಕುರಿತು ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ