Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಂಗಳೂರು:-ಒಂಟಿ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ-ಮಂಗಳಮುಖಿ ಅರೆಸ್ಟ್30-11-2021

ಮಂಗಳೂರು: ಮಂಗಳೂರಿನಲ್ಲಿ  ಒಬ್ಬಂಟಿಯಾಗಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಮ ಕುರಿತು ಬೆಂಗಳೂರು ನಗರದ ಇಜಿಪುರದ ಅಭಿಷೇಕ್ ಅಲಿಯಾಸ್ ಗೊಂಬೆ ಅಲಿಯಾಸ್ ಅನಾಮಿಕ ( 27) ಬಂಧಿತ ಮಂಗಳಮುಖಿ.

ಮಂಗಳೂರು ನಗರದ ನಂತೂರು ಪದವು ಬಳಿಯಿರುವ ಬಿ ಎಸ್ ಎನ್ ಎಲ್ ಎಕ್ಸ್‌ಚೇಂಜ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಣೇಶ್ ಶೆಟ್ಟಿ ರವರು ಬೈಕ್ ನಲ್ಲಿ ಬರುವಾಗ ಈ ಮಂಗಳ ಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಶೆಟ್ಟಿರವರನ್ನು ತಡೆದು ನಿಲ್ಲಿಸಿ , ಅವರ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿ ಅವರ ಕುತ್ತಿಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದನು. 

ಈ ಹಿನ್ನೆಲೆಯಲ್ಲಿಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದಾಗ ಈತ ಮೂರು‌ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ. ಆರೋಪಿ ಯಿಂದ ಒಟ್ಟು 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ವರದಿ:-ಉಡುಪಿ ಫಸ್ಟ್

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo