ಕುಂದಾಪುರ : ಆಟೋ ರಿಕ್ಷಾ ನಿಲ್ದಾಣದ ಒಳಗಡೆ ಟಿಪ್ಪರ್ ಹರಿದ ಪರಿಣಾಮ ನಾಲ್ಕು ಆಟೋಗಳು ಜಖಂ ಆದ ಘಟನೆ ಮಂಗಳವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಸಮೀಪದ ಮುಳ್ಳಿಕಟ್ಟೆ ಕ್ರಾಸ್ ಬಳಿ ನಡೆದಿದೆ.
ಕುಂದಾಪುರ ಕಡೆಯಿಂದ ಬೈಂದೂರಿನತ್ತ ತೆಲಳುತ್ತಿದ್ದ ಟಿಪ್ಪರ್ ಮುಳ್ಳಿಕಟ್ಟೆ ಕ್ರಾಸ್ ಬಳಿ ತಿರುವು ತೆಗೆದುಕೊಂಡ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಪಕ್ಕದಲ್ಲಿರುವ ಆಟೋ ನಿಲ್ದಾಣದ ಒಳಕ್ಕೆ ನುಗ್ಗಿದೆ.
ಟಿಪ್ಪರ್ ನುಗ್ಗಿದ ರಭಸಕ್ಕೆ ನಿಲ್ದಾಣದಲ್ಲಿದ್ದ 4 ಆಟೋಗಳು ನಜ್ಜುಗುಜ್ಜಾಗಿವೆ. ಸದ್ಯ ಅದೃಷ್ಟವಶಾತ್ ಆಟೋ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಟಿಪ್ಪರ್ ಚಾಲಕನ ಅಜಾಗರುಕತೆ, ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ತಕ್ಷಣವೇ ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್‌ಐ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ