Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:-3 ವಿವಾದಿತ ಕೃಷಿ ಕಾಯ್ದೆ ಮರು ಮಂಡನೆ ಸಾಧ್ಯತೆ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

ಉಡುಪಿ:-3 ವಿವಾದಿತ ಕೃಷಿ ಕಾಯ್ದೆ ಮರು ಮಂಡನೆ ಸಾಧ್ಯತೆ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

ಉಡುಪಿ:- ಮೂರು ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆದ ಹಿನ್ನಲೆಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮೂರು ಕೃಷಿ ಕಾಯ್ದೆಗಳನ್ನು ಮರು ಜಾರಿಗೆ ತರುವ ಸಾಧ್ಯತೆ ಇದೆ ಎಂದಿದ್ದಾರೆ.ಕೃಷಿ ಕಾಯ್ದೆ, ಪರಿಷ್ಕೃತವಾಗಿ ಮತ್ತೆ ಮರುಮಂಡನೆ ಮಾಡುವ ಸಾಧ್ಯತೆ ಇದೆ" ಎಂದಿದ್ದಾರೆ.

ಕೇಂದ್ರದಿಂದ ಕೃಷಿ ಕಾಯ್ದೆ ವಾಪಾಸ್‌ ಪಡೆದುಕೊಂಡ ವಿಚಾರಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಕೃಷಿಕರು, ಎಪಿಎಂಸಿ ಪರವಾಗಿ ಇದ್ದ ಕಾಯ್ದೆಯಾಗಿತ್ತು. ಕೃಷಿಕರಿಗೆ ಆರ್ಥಿಕ ಶಕ್ತಿ ಕೊಡಲು ಈ ಕಾಯ್ದೆಯನ್ನು ಮಾಡಲಾಗಿತ್ತು. ಇದು ಬಹುತೇಕ ರೈತರ ಹಿತಕ್ಕಾಗಿ ತಂದ ಕಾಯ್ದೆ. ಒಂದಷ್ಟು ಚರ್ಚೆಗಳು ಇರುವ ಹಿನ್ನೆಲೆ ಮರುಮಂಡನೆ ಮಾಡುವ ಸಾಧ್ಯತೆ ಇದೆ" ಎಂದು ತಿಳಿಸಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಮಣಿಯುವುದು, ಸೋಲುವುದು ಎಂದು ಏನಿಲ್ಲ. ಅನೇಕ ಬಾರಿ ಕಾಯ್ದೆಗಳ ತಿದ್ದುಪಡಿ ಮಾಡಲಾಗಿದೆ. ಮತ್ತಷ್ಟು ಉತ್ಕೃಷ್ಟವಾಗಿ ಮರುಮಂಡನೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo