Slider


ಕಾರವಾರ:-ಮುರ್ಡೇಶ್ವರ ಶಿವನ ವಿಗ್ರಹ ಮೇಲೆ ಐಸಿಸ್ ಕಣ್ಣು-ಪೊಲೀಸ್ ಬಿಗಿ ಭದ್ರತೆ25-11-2021

ಕಾರವಾರ: ವಿಶ್ವ ಪ್ರಸಿದ್ದ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರದ ಮೇಲೆ ಐಸಿಸ್ ಉಗ್ರ ಸಂಘಟನೆ ಕಣ್ಣು ಬಿದ್ದಿರುವ ಶಂಕೆಯ ಮೇಲೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದಿನಿಂದ ಇಲ್ಲಿನ ಬೃಹತ್ ಶಿವನ ವಿಗ್ರಹ ವಿರೂಪಗೊಳಿಸಿದ ಪೋಟೋ ವೈರಲ್ ಆಗಿದ್ದರಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕುಚೋದ್ಯರನ್ನ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಈಗ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಐಸಿಸ್ ಮ್ಯಾಗ್ ಜಿನ್ ನಲ್ಲಿ ಶಿರಚ್ಛೇದ ವಾದ ಈಶ್ವರನ ಬೃಹತ್ ಮೂರ್ತಿಯನ್ನ ಹರಿದಾಡಿ ಸಾಕಷ್ಟು ಆತಂಕ ಸೃಷ್ಟಿಸಿದ ‌ಬೆನ್ನಲ್ಲೆ ಭದ್ರತೆ ನೀಡಲಾಗಿದೆ.

ಮುರುಡೇಶ್ವರದಲ್ಲಿ ಹಿಂದುಪರ ಸಂಘಟನೆಯಿಂದ ಉಗ್ರ ಸಂಘಟನೆ ವಿರುದ್ದ ಪ್ರತಿಭಟನೆ ಕೂಡಾ ನಡೆಯುತ್ತಿದೆ. ವಿಕೃತಿ ಎಸಗಿದವರ ವಿರುದ್ದ ಕೇಂದ್ರ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಆಕ್ರೋಶ ಜೋರಾಗಿ ಕೇಳಿ ಬರುತ್ತಿದೆ.

ಇ ಹಿನ್ನೆಲೆಯಲ್ಲಿ ಮುರುಡೇಶ್ವರದಲ್ಲಿ ಹೆಚ್ಚಿನ ಪೋಲಿಸ್ ಭದ್ರತೆಯನ್ನ‌ ಒದಗಿಸಲಾಗಿದೆ ಜತೆಗೆ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ನಿರಂತರ ಗಸ್ತು ನಡೆಯುತ್ತಿದೆ. ನಿನ್ನೆಯಿಂದ ಮುರುಡೇಶ್ವರ ಕ್ಕೆ ಬರುವ ಪ್ರತಿ ಪ್ರವಾಸಿಗರ ವಾಹನವನ್ನ ತಪಾಸಣೆ ಮಾಡಿ ಮುಂದಿನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಕೃತ ಪೋಟೊ ಸಾಕಷ್ಟು ಆತಂಕ ಸೃಷ್ಟಿಸಿದೆ.

ಶ್ರೀ ಮುರುಡೇಶ್ವರ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ. ವಿಶ್ವ ಪ್ರಸಿದ್ದವಾಗಿರುವ ಈ ಕ್ಷೇತ್ರದ ಮೇಲೆ ಐಸಿಸ್ ಉಗ್ರ ಸಂಘಟನೆ ಕಾಕ ದೃಷ್ಟಿ ಬಿದ್ದಿರುವ ಅನುಮಾನ ಮೂಡಿದೆ. ಇಲ್ಲಿರುವ ಶಿವನ ಪ್ರತಿಮೆಯ ಪೋಟೋವನ್ನ ವಿರೂಪಗೊಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಐಸಿಸ್ ಮುಖವಾಣಿ ದಿ ವೈಸ್ ಆಪ್ ಹಿಂದ್ ನಲ್ಲಿ ಈ ರೀತಿಯಾಗಿ ಪ್ರಕಟವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಮುರ್ಡೇಶ್ವರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುರ್ಡೇಶ್ವರ ಆಸುಪಾಸಿನ ಪ್ರದೇಶಗಳಲ್ಲಿ ಪೊಲೀಸರ ಪಡೆಯನ್ನು ಯೋಜಿಸಲಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo