ಕುಂದಾಪುರ: ಸೌದಿ ಅರೇಬಿಯಾಕ್ಕೆ ತೆರಳುವುದಾಗಿ ಹೇಳಿ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದು ಬಂದಿದೆ.
ನಾಪತ್ತೆಯಾದವರ ಪೈಕಿ ಮಣೂರು ಮೂಲದ ಕೋಟತಟ್ಟು ನಿವಾಸಿ ಮೊಹಮ್ಮದ್ ಜಲೀಲ್(36) ಎಂದು ಗುರುತಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು, ಅ.17ರಂದು ಊರಿಗೆ ಬಂದಿದ್ದರು.
ಬಳಿಕ ಸೌದಿ ಅರೇಬಿಯಾಕ್ಕೆ ವಾಪಾಸ್ಸು ಹೋಗುವುದಾಗಿ ಹೇಳಿ ಹೋದ ಜಲೀಲ್‌ರನ್ನು ಅ.30 ರಂದು ಅವರ ಮಗ ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು.
ಆದರೆ ಜಲೀಲ್ ಸೌದಿ ಅರೇಬಿಯಾಕ್ಕೂ ಹೋಗದೇ ವಾಪಾಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ