ವಿಧಾನ ಪರಿಷತ್ತಿಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರದ ಮಾಹಿತಿ ಪ್ರಕಾರ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಆಸ್ತಿ ವಿವರ ಹೀಗಿದೆ.
ರಾಜ್ಯದಲ್ಲಿ ತನ್ನ ನಡೆ ನುಡಿಗಳಿಂದ ಸರಳ ರಾಜಕಾರಣಿ ಎನಿಸಿಕೊಂಡಿರುವ ಕೋಟಾ ಶ್ರೀನಿವಾಸ ಪೂಜಾರಿ ಅವರು ಒಟ್ಟು 26.76 ಲಕ್ಷದ ಚರಾಸ್ತಿ, 18 ಲಕ್ಷ ಸ್ಥಿರಾಸ್ತಿ, ಹೊಂದಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಅವರ ಬಳಿ ಒಟ್ಟು ನಗದು 3೦ ಸಾವಿರ ರೂಪಾಯಿ ಇದೆ. ಬ್ಯಾಂಕ್ ಠೇವಣಿ 1.10 ಲಕ್ಷ , ಇದೆ.
ಕೋಟಾ ಶ್ರೀನಿವಾಸ ಪೂಜಾರಿ ಅವರ ಬಳಿ 2 ಲಕ್ಷ ಮೌಲ್ಯದ 2006 ಮಾಡೆಲ್‌ನ ಮಾರುತಿ ಆಲ್ಟೋ ಕಾರು, 2016 ಮಾಡೆಲ್‌ನ 23 ಲಕ್ಷದ ಇನ್ನೋವಾ ಕಾರು ಇದೆ.
ಹಾಗೂ 46,000 ಮೌಲ್ಯದ ಚಿನ್ನದ ಉಂಗುರ ಹೊಂದಿದ್ದಾರೆ. ಇನ್ನು ಕೋಟಾ ಶ್ರೀನಿವಾಸ ಪೂಜಾರಿ ಯಾವುದೇ ಕ್ರಿಮಿನಲ್ ಕೇಸ್ ಹೊಂದಿಲ್ಲ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ