ಕರಾವಳಿ ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿದಿದ್ದು ಇನ್ನು ನವೆಂಬರ್ 21 ರವರೆಗೆ ಅಧಿಕ ಮಳೆ ಸುರಿಯುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಂಗಳವಾರ ಮೋಡ ಬಿಸಿಲು ವಾತಾವರಣ ಹೊಂದಿದ್ದು ಹಲವೆಡೆ ಉತ್ತಮ ಮಳೆಯಾಗಿದೆ.
ಮಂಗಳೂರು ಉಡುಪಿ ಜಿಲ್ಲೆ ಸೇರಿದಂತೆ ವಿವಿಧ ಕಡೆಯಲ್ಲಿ ಮಳೆಯಾಗಿದೆ. ಉಡುಪಿ, ಮಲ್ಪೆ, ಮಣಿಪಾಲ ನಗರದ ಸುತ್ತಮುತ್ತ ಬೆಳಗ್ಗೆಯಿಂದ ಜಿಟಿಜಿಟಿ ಮಳೆ ಸುರಿದಿದೆ. ಕಾಪು, ಪಡುಬಿದ್ರೆ, ಹೆಬ್ರಿ, ಮಾಳ, ಕಾರ್ಕಳ, ಬಜಗೋಳಿ ವ್ಯಾಪ್ತಿಯಲ್ಲಿ ಬಿಟ್ಟುಬಿಟ್ಟು ಉತ್ತಮ ವರ್ಷಧಾರೆ ಆಗಿದೆ.
ಇನ್ನು ಕುಂದಾಪುರ ಭಾಗದ ಬೈಂದೂರು, ಕೊಲ್ಲೂರು , ಸಿದ್ದಾಪುರ, ಕೋಟೇಶ್ವರ ಭಾಗದಲ್ಲಿ ಹಗಲಿಡಿ ಮೋಡ ಕವಿದ ವಾತಾವರಣ ಹೊಂದಿದ್ದು ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪುತ್ತೂರು ಸುಳ್ಯ ಮುಂತಾದ ಕಡೆ ಮಳೆಯಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ