Slider


ಉಡುಪಿ:-ನವೆಂಬರ್ 19ರಿಂದ ಕಾಂಗ್ರೆಸ್ ಸದಸ್ಯತ್ವ ಅಭಿಯಾನ

ಉಡುಪಿ:-ನ.19ರಿಂದ ಜಿಲ್ಲೆಯ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಯಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರು ತಮ್ಮ ಬ್ಲಾಕ್ ವ್ಯಾಪ್ತಿಯಲ್ಲಿ ಸದಸ್ಯತ್ವ ಪ್ರಾರಂಭಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದ್ದಾರೆ.
ಇಂದಿನ ಯುವಕರು ಕಾಂಗ್ರೆಸ್ ಬಗ್ಗೆ ಆಕರ್ಷಿತರಾಗಿದ್ದು, ಅವರನ್ನು ಪಕ್ಷದ ಕಡೆಗೆ ಸೆಳೆಯಬೇಕು ಎಂದು ಅವರು ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ದೇಶವು ಹಿಂದೆಂದೂ ಕಾಣದ ಬೆಲೆ ಏರಿಕೆಯ ಬಿಸಿಯಲ್ಲಿ ಬೇಯುತ್ತಿದೆ. ಇದೇ ಕಾರಣಕ್ಕೆ ಜನರ ಆಕ್ರೋಶ ಕಟ್ಟೆಯೊಡೆಯುತ್ತಿದೆ ಎಂಬ ಸೂಚನೆ 13 ರಾಜ್ಯಗಳಲ್ಲಿ ನಡೆದ ಉಪಚುನಾವಣೆ ಫಲಿತಾಂಶದಿಂದ ಗೊತ್ತಾಗಿದ್ದು, ಈ ಹಿನ್ನಲೆಯಲ್ಲಿಯೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಅಲ್ಪ ತಗ್ಗಿಸಿ ಇದನ್ನೇ ಸಾಧನೆಯೆಂದು ಸರಕಾರ ಬಿಂಬಿಸುತ್ತಿರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ನವೀನ್‌ಚಂದ್ರ ಸುವರ್ಣ, ಶಂಕರ್ ಕುಂದರ್, ಹೆಚ್.ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಎಸ್.ಮದನ್ ಕುಮಾರ್, ದಿನಕರ ಹೇರೂರು, ರಮೇಶ್ ಕಾಂಚನ್, ಬಿ.ಭುಜಂಗ ಶೆಟ್ಟಿ, ಹರೀಶ್ ಕಿಣಿ, ಹಬೀಬ್ ಅಲಿ, ಚಂದ್ರಶೇಖರ್ ಶೆಟ್ಟಿ, ದೇವಕಿ ಸಣ್ಣಯ್ಯ, ಸರಸು ಡಿ. ಬಂಗೇರ, ಕಿಶನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo