Slider


ಕಾರ್ಕಳ:-ವ್ಯಕ್ತಿಯ ಅಪಹರಣ ಪ್ರಕರಣ, 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಕಾರ್ಕಳ:-14 ವರ್ಷಗಳ ಹಿಂದಿನ ಪ್ರಕರಣವೊಂದನ್ನು ಭೇದಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ೧೪ ವರ್ಷಗಳ ಹಿಂದೆ ನಡೆದಿದ್ದ ವ್ಯಕ್ತಿಯೋರ್ವನ ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ ಕಾರ್ಕಳ ಪೊಲೀಸರು.

2007 ರಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ಎಂಬಲ್ಲಿ ಕಾರ್ಕಳದ ಕುಕ್ಕುಂದೂರು ನಿವಾಸಿಯಾದ ವೆಂಕಟೇಶ್ ಎಂಬವರನ್ನು ಆರೋಪಿಗಳಾದ ಯೋಗೀಶ್, ಮಂಜುನಾಥ್, ವಸಂತ , ಎಂಬುವರು ಅಪಹರಿಸಿದ್ದರು. ನಂತರ ಅಪಹರಣಕ್ಕೊಳಗಾಗಿದ್ದ ವೆಂಕಟೇಶ್ ಎಂಬವರನ್ನು ಯೋಗೀಶ್ ತನ್ನ ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ್ದರು.

ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯೋಗೀಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು, ಆದರೆ ಮಂಜುನಾಥ್ ಹಾಗೂ ವಸಂತ ಎಂಬುವವರು ತಲೆಮರೆಸಿಕೊಂಡಿದ್ದರು, ಈ ಸಂಬಂಧ ಆರೋಪಿಗಳ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು.

ಈ ಇಬ್ಬರು ಆರೋಪಿಗಳು ಹೊಳೆನರಸೀಪುರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಅಲ್ಲಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo